Isaiah 63:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಜನರು ಯೆಹೋವನಿಗೆ ವಿರುದ್ಧವಾಗಿ ಎದ್ದರು. ಆತನ ಪರಿಶುದ್ಧಾತ್ಮನನ್ನು ದುಃಖಪಡಿಸಿದರು. ಯೆಹೋವನು ಅವರ ಶತ್ರುವಾಗಿ ಪರಿಣಮಿಸಿದನು. ಅಂಥಾ ಜನರಿಗೆ ವಿರುದ್ಧವಾಗಿ ಯೆಹೋವನು ಯುದ್ಧಮಾಡಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರಾದರೋ ಎದುರುಬಿದ್ದು ಆತನ ಪವಿತ್ರಾತ್ಮವನ್ನು ದುಃಖಪಡಿಸಿದರು; ಆದುದರಿಂದ ಆತನು ಮಾರ್ಪಟ್ಟು ಅವರಿಗೆ ಶತ್ರುವಾಗಿ ತಾನೇ ಅವರೊಡನೆ ಹೋರಾಡಿದನು.
Kannada BSI Bible 2016
ಆದರೆ ಅವರು ತಿರುಗಿ ಬಿದ್ದು, ಆತನ ಪರಿಶುದ್ಧಾತ್ಮನನ್ನು ದುಃಖಪಡಿಸಿದರು; ಆದ ದರಿಂದ ಆತನು ತಿರುಗಿಕೊಂಡು, ಅವರಿಗೆ ಶತ್ರು ವಾದನು; ಆತನೇ ಅವರಿಗೆ ವಿರೋಧವಾಗಿ ಯುದ್ಧ ಮಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರಾದರೋ ಎದುರುಬಿದ್ದು ಆತನ ಪವಿತ್ರಾತ್ಮನನ್ನು ದುಃಖಪಡಿಸಿದರು; ಆದದರಿಂದ ಆತನು ಮಾರ್ಪಟ್ಟು ಅವರಿಗೆ ಶತ್ರುವಾಗಿ ತಾನೇ ಅವರೊಡನೆ ಹೋರಾಡಿದನು.
Kannada Bible (KNCL) BSI 2016
ಅವರಾದರೋ ಬಂಡಾಯವೆದ್ದರು; ಸ್ವಾಮಿಯ ಪವಿತ್ರಾತ್ಮನನ್ನು ದುಃಖಪಡಿಸಿದರು. ಎಂತಲೇ ಸರ್ವೇಶ್ವರ ಅವರಿಗೆ ಶತ್ರುವಾಗಿ ಮಾರ್ಪಟ್ಟರು, ತಾವೇ ಅವರಿಗೆ ವಿರುದ್ಧವಾಗಿ ಹೋರಾಡಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಅವರು ತಿರುಗಿಬಿದ್ದು, ಆತನ ಪರಿಶುದ್ಧಾತ್ಮನನ್ನು ದುಃಖಪಡಿಸಿದರು. ಆದ್ದರಿಂದ ಆತನು ಬೇರೆಯಾಗಿ ಅವರಿಗೆ ಶತ್ರುವಾದನು. ಆತನೇ ಅವರಿಗೆ ವಿರೋಧವಾಗಿ ಯುದ್ಧಮಾಡಿದನು.