Isaiah 63:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು ಕೋಪಗೊಂಡಾಗ ಜನಾಂಗಗಳ ಮೇಲೆ ತುಳಿದಾಡಿದೆನು. ನಾನು ಸಿಟ್ಟುಗೊಂಡಾಗ ಅವರನ್ನು ಶಿಕ್ಷಿಸಿದೆನು. ಅವರ ರಕ್ತವನ್ನು ನೆಲದ ಮೇಲೆ ಚೆಲ್ಲಿದೆನು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನನ್ನ ಕೋಪದಿಂದ ಜನಾಂಗಗಳನ್ನು ತುಳಿದು ರೋಷವೇರಿದವನಾಗಿ, ಅವುಗಳನ್ನು ಚೂರುಚೂರು ಮಾಡಿ ನೆಲದ ಮೇಲೆ ಅವುಗಳ ಸಾರವನ್ನು ಸುರಿಸಿದೆನು.
Kannada BSI Bible 2016
ನನ್ನ ಕೋಪ ದಲ್ಲಿ ಜನಗಳನ್ನು ತುಳಿದು ಬಿಟ್ಟೆನು; ನನ್ನ ರೋಷ ದಲ್ಲಿ ಅವರನ್ನು ಕುಡಿಯುವಂತೆ ಮಾಡಿದೆನು; ಅವರ ಶಕ್ತಿಯನ್ನು ಭೂಮಿಗೆ ಇಳಿಯುವಂತೆ ಮಾಡಿದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನನ್ನ ಕೋಪದಿಂದ ಜನಾಂಗಗಳನ್ನು ತುಳಿದು ರೋಷವೇರಿದವನಾಗಿ ಅವುಗಳನ್ನು ಚೂರುಚೂರು ಮಾಡಿ ನೆಲದ ಮೇಲೆ ಅವುಗಳ ಸಾರವನ್ನು ಸುರಿಸಿದೆನು.
Kannada Bible (KNCL) BSI 2016
ರಾಷ್ಟ್ರಗಳನು ತುಳಿದೆ ಕುಪಿತನಾಗಿ ಅವುಗಳನು ನುಚ್ಚುನೂರುಮಾಡಿದೆ ರೋಷಾವಿಷ್ಟನಾಗಿ ಅವುಗಳ ರಕ್ತವನು ನೆಲದಲಿ ಹರಿಸಿದೆ ಪ್ರವಾಹವಾಗಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನನ್ನ ಕೋಪದಲ್ಲಿ ಜನಾಂಗಗಳನ್ನು ತುಳಿದುಬಿಟ್ಟೆನು. ನನ್ನ ಉರಿಯಲ್ಲಿ ಅವರನ್ನು ಕುಡಿಯುವಂತೆ ಮಾಡಿದೆನು. ಅವರ ರಕ್ತವನ್ನು ಭೂಮಿಗೆ ಸುರಿಸಿದೆನು.”