Isaiah 65:24 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವರು ಕೇಳುವ ಮೊದಲೇ ಅವರಿಗೆ ಏನುಬೇಕು ಎಂಬುದನ್ನು ಅರಿತುಕೊಳ್ಳುವೆನು. ಅವರ ಪ್ರಾರ್ಥನೆ ಮುಗಿಯುವ ಮೊದಲೇ ಅವರಿಗೆ ಸಹಾಯ ಮಾಡುವೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಅವರು ಬೇಡುವುದರೊಳಗೆ ಸದುತ್ತರವನ್ನು ದಯಪಾಲಿಸುವೆನು; ಅವರು ಹೇಳುತ್ತಿರುವಾಗಲೇ ಕೇಳುವೆನು.
Kannada BSI Bible 2016
ಅವರು ಕರೆಯುವದಕ್ಕಿಂತ ಮುಂಚೆ ನಾನು ಉತ್ತರ ಕೊಡುವೆನು ಅವರು ಇನ್ನೂ ಮಾತಾಡು ತ್ತಿರುವಾಗಲೇ ನಾನು ಕೇಳಿಸಿಕೊಳ್ಳುವೆನು.ತೋಳ ವೂ ಕುರಿಮರಿಯೂ ಒಂದಾಗಿ ಮೇಯುವವು; ಸಿಂಹವು ಎತ್ತಿನ ಹಾಗೆ ಹುಲ್ಲು ತಿನ್ನುವದು; ಹಾವಿಗೋ ಅದರ ಆಹಾರವು ಮಣ್ಣೇ; ಅವು ನನ್ನ ಪರಿಶುದ್ಧ ಪರ್ವತದಲ್ಲಿ ಕೇಡುಮಾಡುವದಿಲ್ಲ ಮತ್ತು ನಾಶ ಮಾಡುವದಿಲ್ಲ ಎಂದು ಕರ್ತನು ಹೇಳುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಅವರು ಬೇಡುವದರೊಳಗೆ ಸದುತ್ತರವನ್ನು ದಯಪಾಲಿಸುವೆನು; ಅವರು ಹೇಳುತ್ತಿರುವಾಗಲೇ ಕೇಳುವೆನು.
Kannada Bible (KNCL) BSI 2016
ಅವರು ಮೊರೆಯಿಡುವುದಕ್ಕೆ ಮುಂಚೆಯೇ ನಾ ಕಿವಿಗೊಡುವೆನು; ಅವರು ಪ್ರಾರ್ಥಿಸುವಾಗಲೇ ನಾನು ಸದುತ್ತರ ನೀಡುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಕರೆಯುವುದಕ್ಕಿಂತ ಮುಂಚೆ ನಾನು ಉತ್ತರಕೊಡುವೆನು. ಅವರು ಇನ್ನೂ ಮಾತನಾಡುತ್ತಿರುವಾಗಲೇ ನಾನು ಕೇಳುವೆನು.