Isaiah 65:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರು ನನ್ನ ಮುಂದೆ ಯಾವಾಗಲೂ ಇದ್ದು ನನ್ನನ್ನು ರೋಷಗೊಳಿಸಿದರು. ಅವರು ತಮ್ಮ ವಿಶೇಷವಾದ ತೋಟಗಳಲ್ಲಿ ಧೂಪಹಾಕಿ ಬಲಿಯರ್ಪಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈ ಜನರು ವನಗಳಲ್ಲಿ ಯಜ್ಞ ಮಾಡುತ್ತಾ, ಇಟ್ಟಿಗೆಯ ಯಜ್ಞವೇದಿಯ ಮೇಲೆ ಧೂಪಹಾಕುತ್ತಾ ನನ್ನನ್ನು ಯಾವಾಗಲೂ ಕೆಣಕುತ್ತಾರೆ.
Kannada BSI Bible 2016
ಇವರು ಯಾವಾಗಲೂ ನನ್ನ ಮುಖದೆ ದುರಿಗೆ ನನಗೆ ಕೋಪೋದ್ರೇಕವನ್ನು ಎಬ್ಬಿಸುವ ಜನರು; ತೋಟಗಳಲ್ಲಿ ಬಲಿ ಅರ್ಪಿಸಿ, ಇಟ್ಟಿಗೆಯ ಯಜ್ಞವೇದಿಯ ಮೇಲೆ ಧೂಪ ಸುಡುವರು;
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ಜನರು ವನಗಳಲ್ಲಿ ಯಜ್ಞಮಾಡುತ್ತಾ ಇಟ್ಟಿಗೆಯ ವೇದಿಯ ಮೇಲೆ ಧೂಪಹಾಕುತ್ತಾ ಗೋರಿಗಳಲ್ಲಿ ಕೂತುಕೊಳ್ಳುತ್ತಾ
Kannada Bible (KNCL) BSI 2016
ಈ ಜನರು ತೋಪುಗಳಲ್ಲಿ ಬಲಿಕೊಡುತ್ತಾರೆ. ಇಟ್ಟಿಗೆಯ ಪೀಠಗಳ ಮೇಲೆ ಧೂಪಾರತಿ ಎತ್ತುತ್ತಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇವರು ಯಾವಾಗಲೂ ನನ್ನ ಮುಖದ ಮುಂದೆ ನನಗೆ ಕೋಪೋದ್ರೇಕವನ್ನು ಎಬ್ಬಿಸುವ ಜನರು. ತೋಟಗಳಲ್ಲಿ ಬಲಿ ಅರ್ಪಿಸಿ, ಇಟ್ಟಿಗೆಯ ಬಲಿಪೀಠದ ಮೇಲೆ ಧೂಪ ಸುಡುವರು.