Isaiah 66:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಪ್ರಸವವೇದನೆಗಿಂತ ಮೊದಲು ಸ್ತ್ರೀಯು ಮಗುವನ್ನು ಹೆರುವದಿಲ್ಲ. ತಾನು ಹೆರುವ ಶಿಶುವನ್ನು ನೋಡುವ ಮೊದಲು ಸ್ತ್ರೀಯು ಪ್ರಸವವೇದನೆ ಅನುಭವಿಸಲೇಬೇಕು. ಅದೇ ರೀತಿಯಲ್ಲಿ ಒಂದೇ ದಿನದಲ್ಲಿ ಹೊಸ ಭೂಮ್ಯಾಕಾಶಗಳು ಉಂಟಾಗುವದನ್ನು ಯಾರೂ ನೋಡುವದಿಲ್ಲ. ಒಂದೇ ದಿವಸದಲ್ಲಿ ಉಂಟಾದ ಜನಾಂಗದ ಬಗ್ಗೆ ಯಾರೂ ಕೇಳಲಿಲ್ಲ. ದೇಶವು ಪ್ರಸವವೇದನೆಯಂಥ ಬೇನೆಯನ್ನು ಅನುಭವಿಸಬೇಕು. ಆ ಬಳಿಕ ದೇಶವು ಹೊಸ ಜನಾಂಗವೆಂಬ ಮಕ್ಕಳನ್ನು ಹೆರುವುದು. (Verses 7-8)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಹಾ, ಬೇನೆ ತಿನ್ನುವುದರೊಳಗೆ ಹೆರಿಗೆಯಾಯಿತು, ಪ್ರಸವವೇದನೆ ಇನ್ನು ಕಾಣದಿರುವಲ್ಲಿ ಗಂಡು ಮಗುವನ್ನು ಹೆತ್ತಳು.
Kannada BSI Bible 2016
ಅವಳಿಗೆ ಪ್ರಸವವೇದನೆ ಆಗುವದಕ್ಕಿಂತ ಮುಂಚೆ ಹೆತ್ತಳು, ಅವಳಿಗೆ ನೋವು ಬರುವದಕ್ಕಿಂತ ಮುಂಚೆ ಗಂಡು ಮಗುವನ್ನು ಹೆತ್ತಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಹಾ, ಬೇನೆ ತಿನ್ನುವದರೊಳಗೆ ಹೆರಿಗೆಯಾಯಿತು, ಪ್ರಸವವೇದನೆ ಇನ್ನು ಕಾಣದಿರುವಲ್ಲಿ ಗಂಡನ್ನು ಹಡೆದಳು.
Kannada Bible (KNCL) BSI 2016
“ ‘ಪ್ರಸವವೇದನೆಗೆ ಮುಂಚೆಯೇ ಹೆರಿಗೆಯಾಯಿತು; ಪ್ರಸವವೇದನೆ ಪಡುವುದರೊಳಗೆ ಗಂಡನ್ನು ಹೆತ್ತಳು’.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಅವಳಿಗೆ ನೋವು ಆಗುವುದಕ್ಕಿಂತ ಮುಂಚೆಯೇ ಹೆತ್ತಳು. ವೇದನೆ ಬರುವುದಕ್ಕಿಂತ ಮುಂಚೆಯೇ ಗಂಡು ಕೂಸು ಪಡೆದಳು.