Isaiah 8:1 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನು ಹೇಳಿದ್ದೇನೆಂದರೆ, “ಒಂದು ದೊಡ್ಡ ಸುರುಳಿಯನ್ನು ತಂದು ಅದರ ಮೇಲೆ ಹೀಗೆ ಲೇಖನಿಯಿಂದ ಬರೆ: ‘ಮಹೇರ್ ಶಾಲಾಲ್ ಹಾಷ್ ಬಜ್‌’ (ಇದರರ್ಥ: ‘ಕೊಳ್ಳೆಗೆ ಅವಸರ,’ ‘ಸೂರೆಗೆ ಆತುರ.’)”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಮೇಲೆ ಯೆಹೋವನು ನನಗೆ, “ದೊಡ್ಡ ಹಲಗೆಯನ್ನು ತೆಗೆದುಕೊಂಡು ಸಾಧಾರಣ ಲೇಖನಿಯಿಂದಲೇ ವಿಷಯ ಸೂಚಕವಾದ ಈ ಪದವನ್ನು ಬರೆ, ‘ಮಹೇರ್ ಶಾಲಾಲ್ ಹಾಷ್ ಬಜ್ ’ ಅಂದರೆ ಸೂರೆಗೆ ಅತುರ, ಕೊಳ್ಳೆಗೆ ಅವಸರ.
Kannada BSI Bible 2016
ಇದಲ್ಲದೆ ಕರ್ತನು ನನಗೆ -- ಒಂದು ದೊಡ್ಡ ಸುರುಳಿಯನ್ನು ತೆಗೆದುಕೊಂಡು ಮನುಷ್ಯನ ಲೇಖನಿಯಿಂದಲೇ ಮಹೇರ್‌ ಶಾಲಾಲ್‌ ಹಾಷ್‌ ಬಜ್‌ (ಅಂದರೆ ಸೂರೆಗೆ ಆತುರ, ಕೊಳ್ಳೆಗೆ ಅವಸರ) ವಿಷಯವಾಗಿ ಬರೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಮೇಲೆ ಯೆಹೋವನು ನನಗೆ - ದೊಡ್ಡ ಹಲಿಗೆಯನ್ನು ತೆಗೆದುಕೊಂಡು ಸಾಧಾರಣ ಲಿಪಿಯಿಂದಲೇ ವಿಷಯಸೂಚಕವಾದ ಈ ಪದವನ್ನು ಬರೆ - ಮಹೇರ್ ಶಾಲಾಲ್ ಹಾಷ್ ಬಜ್ [ಅಂದರೆ ಸೂರೆಗೆ ಆತುರ, ಕೊಳ್ಳೆಗೆ ಅವಸರ];
Kannada Bible (KNCL) BSI 2016
ಅನಂತರ ಸರ್ವೇಶ್ವರಸ್ವಾಮಿ ನನಗೆ ಹೀಗೆಂದರು: “ಬರೆಯುವ ದೊಡ್ಡ ಹಲಗೆ ಒಂದನ್ನು ತೆಗೆದುಕೊಂಡು ಸಾಧಾರಣ ಲಿಪಿಯಲ್ಲಿ, ಈ ಸೂಚ್ಯವಾದ ಪದಗಳನ್ನು ಬರೆ: ‘ಮಹೇರ್ ಶಾಲಾಲ್ ಹಾಷ್ ಬಜ್’ (ಅಂದರೆ ಸೂರೆಗೆ ಆತುರ; ಕೊಳ್ಳೆಗೆ ಅವಸರ).
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರು, “ಒಂದು ದೊಡ್ಡ ಸುರುಳಿಯನ್ನು ತೆಗೆದುಕೊಂಡು ಸಾಮಾನ್ಯ ಲೇಖನಿಯಿಂದಲೇ ಮಹೇರ್ ಶಾಲಾಲ್ ಹಾಷ್ ಬಜ್, ಎಂದರೆ ಸೂರೆಗೆ ಆತುರ, ಕೊಳ್ಳೆಗೆ ಅವಸರ ಎಂದು ಬರೆ,” ಎಂಬುದಾಗಿ ನನಗೆ ಹೇಳಿದರು.

Recommended Reading