Isaiah 8:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಮೇಲೆ ನಾನು ಒಬ್ಬ ಪ್ರವಾದಿನಿಯ ಬಳಿಗೆ ಹೋದೆನು. ಆಕೆಯನ್ನು ಕೂಡಲು, ಆಕೆ ಗರ್ಭವತಿಯಾಗಿ ಒಬ್ಬ ಮಗನನ್ನು ಹಡೆದಳು. ಆಗ ಯೆಹೋವನು ನನಗೆ, “ಆ ಮಗನಿಗೆ ‘ಮಹೇರ್ ಶಾಲಾಲ್ ಹಾಷ್ ಬಜ್‌’ ಎಂಬ ಹೆಸರನ್ನಿಡು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನಂತರ, “ನಾನು ನನ್ನ ಹೆಂಡತಿಯೊಡನೆ ಸಂಗಮಿಸಲು ಆಕೆಯು ಬಸುರಾಗಿ ಗಂಡು ಮಗುವನ್ನು ಹೆತ್ತಳು. ಆಗ ಯೆಹೋವನು ನನಗೆ, ಅದಕ್ಕೆ ‘ಮಹೇರ್ ಶಾಲಾಲ್ ಹಾಷ್ ಬಜ್ ಎಂದು ಹೆಸರಿಡು’ ಎಂದು ಹೇಳಿದನು.
Kannada BSI Bible 2016
ಅನಂತರ ನಾನು ಪ್ರವಾದಿನಿ ಯನ್ನು ಕೂಡಲು ಆಕೆಯು ಬಸುರಾಗಿ ಒಬ್ಬ ಮಗನನ್ನು ಹೆತ್ತಳು. ಆಗ ಕರ್ತನು ನನಗೆ--ಅವನಿಗೆ ಮಹೇರ್‌ ಶಾಲಾಲ್‌ ಹಾಷ್‌ ಬಜ್‌ ಎಂದು ಹೆಸರಿಡು ಎಂದು ಹೇಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನಂತರ ನಾನು ನನ್ನ ಹೆಂಡತಿಯನ್ನು ಕೂಡಲು ಆಕೆಯು ಬಸುರಾಗಿ ಗಂಡು ಮಗುವನ್ನು ಹೆತ್ತಳು. ಆಗ ಯೆಹೋವನು ನನಗೆ - ಅದಕ್ಕೆ ಮಹೇರ್ ಶಾಲಾಲ್ ಹಾಷ್ ಬಜ್ ಎಂದು ಹೆಸರಿಡು.
Kannada Bible (KNCL) BSI 2016
ಸ್ವಲ್ಪಕಾಲವಾದ ನಂತರ ನಾನು ಪ್ರವಾದಿನಿಯನ್ನು ಕೂಡಲು ಆಕೆ ಗರ್ಭವತಿಯಾಗಿ ಗಂಡುಮಗುವನ್ನು ಹೆತ್ತಳು. ಆಗ ನನಗೆ: “ಆ ಮಗುವಿಗೆ ‘ಮಹೇರ್ ಶಾಲಾಲ್ ಹಾಷ್ ಬಜ್’ ಎಂದು ಹೆಸರಿಡು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅನಂತರ ನಾನು ಪ್ರವಾದಿನಿಯಾದ ನನ್ನ ಹೆಂಡತಿಯನ್ನು ಕೂಡಲು, ಆಕೆಯು ಗರ್ಭಧರಿಸಿ ಒಬ್ಬ ಗಂಡುಮಗುನ್ನು ಹೆತ್ತಳು. ಆಗ ಯೆಹೋವ ದೇವರು ನನಗೆ, “ಆ ಮಗುವಿಗೆ, ಮಹೇರ್ ಶಾಲಾಲ್ ಹಾಷ್ ಬಜ್ ಎಂದು ಹೆಸರಿಡು, ಎಂದು ಹೇಳಿದರು.