James 2:11 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ವ್ಯಭಿಚಾರ ಮಾಡಬಾರದು” ಎಂದೂ ಅದೇ ದೇವರು ಹೇಳಿದನು. ಹೀಗಿರಲಾಗಿ, ನೀವು ವ್ಯಭಿಚಾರವನ್ನು ಮಾಡದಿದ್ದರೂ ಯಾರನ್ನೇ ಆಗಲಿ ಕೊಂದರೆ, ದೇವರ ಇಡೀ ಧರ್ಮಶಾಸ್ತ್ರವನ್ನೇ ಉಲ್ಲಂಘಿಸಿದವರಾಗಿದ್ದೀರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಏಕೆಂದರೆ ವ್ಯಭಿಚಾರ ಮಾಡಬಾರದೆಂದು ಹೇಳಿದವನೇ ನರಹತ್ಯ ಮಾಡಬಾರದೆಂತಲೂ ಹೇಳಿದನು. ಆದಕಾರಣ ನೀನು ವ್ಯಭಿಚಾರಮಾಡದೆ ಇದ್ದರೂ ನರಹತ್ಯ ಮಾಡಿದರೆ ಧರ್ಮಶಾಸ್ತ್ರವನ್ನು ಮೀರಿದವನಾಗಿರುತ್ತಿ.
Kannada BSI Bible 2016
ವ್ಯಭಿಚಾರ ಮಾಡಬಾರ ದೆಂದು ಹೇಳಿದಾತನೇ--ನರಹತ್ಯ ಮಾಡಬಾರ ದೆಂತಲೂ ಹೇಳಿದನು. ಆದಕಾರಣ ನೀನು ವ್ಯಭಿಚಾರ ಮಾಡದೆ ಇದ್ದರೂ ನರಹತ್ಯ ಮಾಡಿದರೆ ನ್ಯಾಯ ಪ್ರಮಾಣವನ್ನು ವಿಾರಿದವನಾದಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ವ್ಯಭಿಚಾರಮಾಡಬಾರದೆಂದು ಹೇಳಿದವನೇ ನರಹತ್ಯಮಾಡಬಾರದೆಂತಲೂ ಹೇಳಿದನು. ಆದಕಾರಣ ನೀನು ವ್ಯಭಿಚಾರಮಾಡದೆ ಇದ್ದರೂ ನರಹತ್ಯ ಮಾಡಿದರೆ ಧರ್ಮಪ್ರಮಾಣವನ್ನು ಮೀರಿದವನಾದಿ.
Kannada Bible (KNCL) BSI 2016
ಏಕೆಂದರೆ, ‘ವ್ಯಭಿಚಾರ ಮಾಡಬೇಡ’ ಎಂದು ಹೇಳಿದ ದೇವರೇ, ‘ಕೊಲ್ಲಬೇಡ’ ಎಂದೂ ಹೇಳಿದ್ದಾರೆ. ನೀನು ವ್ಯಭಿಚಾರ ಮಾಡದಿದ್ದರೂ ಕೊಲೆ ಮಾಡುವವನಾದರೆ ಧರ್ಮಶಾಸ್ತ್ರವನ್ನೇ ಮೀರಿದಂತಾಗುತ್ತದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಕೆಂದರೆ, “ವ್ಯಭಿಚಾರ ಮಾಡಬಾರದು,” ಎಂದು ಹೇಳಿದ ದೇವರೇ, “ನರಹತ್ಯೆ ಮಾಡಬಾರದು,” ಎಂತಲೂ ಹೇಳಿದರು. ಆದಕಾರಣ ನೀನು ವ್ಯಭಿಚಾರ ಮಾಡದೆ ಇದ್ದರೂ ನರಹತ್ಯೆ ಮಾಡಿದರೆ ನಿಯಮವನ್ನು ಮೀರಿದವನಾದೆ.