James 3:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನನ್ನ ಸಹೋದರ ಸಹೋದರಿಯರೇ, ಅಂಜೂರದ ಮರವು ಆಲಿವ್ ಕಾಯಿಗಳನ್ನು ಬಿಡುವುದೇ? ಇಲ್ಲ! ದ್ರಾಕ್ಷಿಬಳ್ಳಿಯು ಅಂಜೂರದ ಹಣ್ಣನ್ನು ಬಿಡುವುದೇ? ಇಲ್ಲ! ಉಪ್ಪು ನೀರಿನಿಂದ ತುಂಬಿದ ಬಾವಿಯು ಸಿಹಿ ನೀರನ್ನು ಕೊಡುವುದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನನ್ನ ಸಹೋದರರೇ, ಅಂಜೂರದ ಮರವು ಎಣ್ಣೆ ಮರದ ಕಾಯಿ ಬಿಡುವುದೋ? ದ್ರಾಕ್ಷಿ ಬಳ್ಳಿಯಲ್ಲಿ ಅಂಜೂರದ ಹಣ್ಣು ಬಿಡುವುದೋ? ಹಾಗೆಯೇ ಉಪ್ಪುನೀರಿನ ಬುಗ್ಗೆಯಿಂದ ಸಿಹಿ ನೀರು ಬರುವುದಿಲ್ಲ.
Kannada BSI Bible 2016
ನನ್ನ ಸಹೋದರರೇ, ಅಂಜೂರದ ಮರವು ಎಣ್ಣೇಮರದ ಕಾಯಿ ಬಿಡುವದೋ? ದ್ರಾಕ್ಷೇ ಬಳ್ಳಿಯಲ್ಲಿ ಅಂಜೂರದ ಹಣ್ಣಾಗುವದೋ? ಹಾಗೆಯೇ ಯಾವ ಊಟೆಯೂ ಉಪ್ಪು ನೀರನ್ನೂ ಸಿಹಿ ನೀರನ್ನೂ ಕೊಡಲಾರದು.
Kannada BSI JV (ಕನ್ನಡ ಸತ್ಯವೇದವು J.V. (BSI))
ನನ್ನ ಸಹೋದರರೇ, ಅಂಜೂರದ ಮರವು ಎಣ್ಣೇ ಮರದ ಕಾಯಿ ಬಿಡುವದೋ? ದ್ರಾಕ್ಷೇ ಬಳ್ಳಿಯಲ್ಲಿ ಅಂಜೂರದ ಹಣ್ಣಾಗುವದೋ? ಹಾಗೆಯೇ ಉಪ್ಪುನೀರಿನ ಬಾವಿಯಿಂದ ಸಿಹಿನೀರು ಬರುವದಿಲ್ಲ.
Kannada Bible (KNCL) BSI 2016
ಅಂಜೂರದ ಮರ ಓಲಿವ್ ಹಣ್ಣನ್ನು ಕೊಡುವುದುಂಟೇ? ದ್ರಾಕ್ಷಿಯ ಬಳ್ಳಿಯಲ್ಲಿ ಅಂಜೂರ ಸಿಕ್ಕೀತೇ? ಎಂದಿಗೂ ಇಲ್ಲ. ಅಂತೆಯೇ ಸೌಳು ನೀರಿನ ಒರತೆಯಿಂದ ಸಿಹಿ ನೀರು ಬರುವುದಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನನ್ನ ಪ್ರಿಯರೇ, ಅಂಜೂರದ ಮರವು ಎಣ್ಣೇಮರದ ಕಾಯನ್ನು ಬಿಡುವುದೋ? ದ್ರಾಕ್ಷೇ ಬಳ್ಳಿಯಲ್ಲಿ ಅಂಜೂರದ ಹಣ್ಣಾಗುವದೋ? ಉಪ್ಪುನೀರಿನ ಬುಗ್ಗೆಯು ಸಿಹಿನೀರನ್ನು ಕೊಡಲು ಎಂದಿಗೂ ಸಾಧ್ಯವಿಲ್ಲ.