Jeremiah 10:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ಯಾಕೋಘ್ಯರ ದೇವರು ಆ ವಿಗ್ರಹಗಳಂತಲ್ಲ. ಆತನು ಸಮಸ್ತವನ್ನೂ ನಿರ್ಮಿಸಿದಾತನಾಗಿದ್ದಾನೆ. ಇಸ್ರೇಲು ಆತನ ಸಾಬಸ್ತ್ಯವಾದ ಜನಾಂಗ. “ಸರ್ವಶಕ್ತನಾದ ಯೆಹೋವ” ಎಂಬುದು ಆತನ ನಾಮಧೇಯ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಾಕೋಬ್ಯರ ಸ್ವಾಸ್ತ್ಯವಾದಾತನು ಅವುಗಳ ಹಾಗಲ್ಲ; ಆತನು ಸಮಸ್ತವನ್ನೂ ನಿರ್ಮಿಸಿದವನು. ಇಸ್ರಾಯೇಲ್ ಆತನ ಸ್ವಾಸ್ತ್ಯವಾದ ವಂಶ; ಸೇನಾಧೀಶ್ವರನಾದ ಯೆಹೋವನೆಂಬುದು ಆತನ ನಾಮಧೇಯ.
Kannada BSI Bible 2016
ಸೌಂದರ್ಯವಾದ ಒಳ್ಳೇ ಹಣ್ಣುಗಳುಳ್ಳ ಹಸುರಾದ ಇಪ್ಪೇ ಗಿಡವೆಂದು ಕರ್ತನು ನಿನಗೆ ಹೆಸ ರಿಟ್ಟನು; ದೊಡ್ಡ ಗದ್ದಲದಿಂದ ಅದರ ಮೇಲೆ ಬೆಂಕಿ ಹತ್ತಿಸಿದ್ದಾನೆ ಅದರ ಕೊಂಬೆಗಳು ಮುರಿದು ಹೋಗಿವೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾಕೋಬ್ಯರ ಸ್ವಾಸ್ತ್ಯವಾದಾತನು ಅವುಗಳ ಹಾಗಲ್ಲ; ಆತನು ಸಮಸ್ತವನ್ನೂ ನಿರ್ಮಿಸಿದವನು; ಇಸ್ರಾಯೇಲು ಆತನ ಸ್ವಾಸ್ತ್ಯವಾದ ವಂಶ; ಸೇನಾಧೀಶ್ವರನಾದ ಯೆಹೋವನೆಂಬದು ಆತನ ನಾಮಧೇಯ.
Kannada Bible (KNCL) BSI 2016
ಹಾಗಲ್ಲ ಯಕೋಬ್ಯರಿಗೆ ಸ್ವಂತವಾದ ದೇವರು ಅವರು ಸಮಸ್ತವನ್ನು ಸೃಷ್ಟಿಸಿದವರು. ಇಸ್ರಯೇಲ್ ಗೋತ್ರ ಅವರಿಗೆ ಸ್ವಾಸ್ತ್ಯ. ‘ಸೇನಾಧೀಶ್ವರ ಸರ್ವೇಶ್ವರ’ ಅವರ ನಾಮಧೇಯ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯಾಕೋಬ್ಯರ ಪಾಲಾಗಿರುವವರು ಇವುಗಳ ಹಾಗಲ್ಲ. ಏಕೆಂದರೆ ಅವರು ಎಲ್ಲವನ್ನು ರೂಪಿಸಿದವರೇ, ಇಸ್ರಾಯೇಲ್ ಅವರ ಸ್ವಾಸ್ತ್ಯವಾದ ವಂಶ. ಅವರ ಹೆಸರು ಸೇನಾಧೀಶ್ವರ ಯೆಹೋವ ದೇವರೇ.