Jeremiah 10:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಯ್ಯೋ, ನನಗೆ (ಯೆರೆಮೀಯನಿಗೆ) ತುಂಬಾ ಪೆಟ್ಟಾಗಿದೆ. ನನಗೆ ಗಾಯವಾಗಿದೆ; ನನಗೆ ವಾಸಿಯಾಗುತ್ತಿಲ್ಲ. ಆದರೂ “ಇದು ನನ್ನ ವ್ಯಾಧಿ, ಇದನ್ನು ನಾನು ಅನುಭವಿಸಬೇಕು” ಎಂದು ಸಮಾಧಾನ ತಂದುಕೊಂಡೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಯ್ಯೋ, ನನ್ನ ಗಾಯ! ನನಗೆ ಬಿದ್ದ ಪೆಟ್ಟು ಭೀಕರ! ಆದರೂ ನಾನು, “ಇದು ನನಗೆ ವ್ಯಾಧಿಯೇ ಸರಿ, ಸಹಿಸಬೇಕು” ಅಂದುಕೊಂಡಿದ್ದೇನೆ.
Kannada BSI Bible 2016
ಆದರೆ ನಾನು ವಧೆಗೆ ತಕ್ಕೊಂಡು ಹೋಗುವ ಕುರಿಯಹಾಗೆ ಇಲ್ಲವೆ ಎತ್ತಿನ ಹಾಗೆ ಇದ್ದೆನು; ನನಗೆ ವಿರೋಧವಾಗಿ ಕಲ್ಪನೆಗಳನ್ನು ಕಲ್ಪಿಸು ತ್ತಾರೆಂದೂ ಮರವನ್ನೂ ಅದರ ಫಲವನ್ನೂ ಕೆಡಿಸಿ ಅವನ ಹೆಸರು ಇನ್ನು ಜ್ಞಾಪಕಮಾಡಲ್ಪಡದ ಹಾಗೆ ಜೀವಿತರ ದೇಶದೊಳಗಿಂದ ಅವನನ್ನು ಕಡಿದು ಬಿಡೋಣ ಎಂದು ಅಂದುಕೊಳ್ಳುತ್ತಾರೆಂದೂ ನನಗೆ ತಿಳಿಯಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಯ್ಯೋ, ನನ್ನ ಗಾಯ! ನನಗೆ ಬಿದ್ದ ಪೆಟ್ಟು ಗಡುಸು! ಆದರೂ ನಾನು - ಇದು ನನಗೆ ವ್ಯಾಧಿಯೇ ಸರಿ, ಸಹಿಸಬೇಕು ಅಂದುಕೊಂಡಿದ್ದೇನೆ.
Kannada Bible (KNCL) BSI 2016
ಜೆರುಸಲೇಮಿನ ಗೋಳು: “ಅಯ್ಯೋ ನಾನು ಗಾಯಗೊಂಡೆ ನನಗೆ ಬಿದ್ದ ಪೆಟ್ಟು ಗಡಸು. ತಗಲಿದೆ ವ್ಯಾಧಿ, ಸಹಿಸಲೇಬೇಕಾದ ಕಾಯಿಲೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನನ್ನ ನೋವಿನ ನಿಮಿತ್ತ ನನಗೆ ಅಯ್ಯೋ, ನನ್ನ ಗಾಯವು ವಾಸಿಪಡಿಸಲಾಗದು. ಆದರೆ ನಾನು ನಿಶ್ಚಯವಾಗಿ, “ಇದು ನನ್ನ ರೋಗ, ಇದನ್ನು ನಾನು ಸಹಿಸಲೇಬೇಕಾಗಿದೆ,” ಎಂದೆನು.