Jeremiah 10:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನನ್ನ ಗುಡಾರವು ಹಾಳಾಗಿದೆ. ಗುಡಾರದ ಎಲ್ಲಾ ಹಗ್ಗಗಳು ಕಿತ್ತುಹೋಗಿವೆ. ನನ್ನ ಮಕ್ಕಳು ನನ್ನನ್ನು ಬಿಟ್ಟು ಹೊರಟುಹೋಗಿದ್ದಾರೆ. ನನ್ನ ಗುಡಾರವನ್ನು ಹಾಕುವದಕ್ಕೆ ಯಾರೂ ಉಳಿದಿಲ್ಲ. ನನಗಾಗಿ ಒಂದು ಆಸರೆಯನ್ನು ನಿರ್ಮಿಸುವದಕ್ಕೆ ಯಾರೂ ಉಳಿದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನನ್ನ ಗುಡಾರವು ಹಾಳಾಗಿದೆ, ಹಗ್ಗಗಳು ಹರಿದುಹೋಗಿವೆ, ಮಕ್ಕಳು ನನ್ನೊಳಗಿಂದ ತೊಲಗಿ ಇಲ್ಲವಾಗಿದ್ದಾರೆ. ನನ್ನ ಗುಡಾರವನ್ನು ಹಾಕುವುದಕ್ಕೂ, ನನ್ನ ಪರದೆಗಳನ್ನು ಬಿಗಿಯುವುದಕ್ಕೂ ಇನ್ನು ಯಾರೂ ಇರುವುದಿಲ್ಲ.
Kannada BSI Bible 2016
ಆದರೆ ನೀತಿಯಿಂದ ನ್ಯಾಯತೀರಿಸು ವಂಥ ಅಂತರಿಂದ್ರಿಯಗಳನ್ನೂ ಹೃದಯವನ್ನೂ ಶೋಧಿಸುವಂಥ ಸೈನ್ಯಗಳ ಕರ್ತನೇ, ನೀನು ಅವರಿಗೆ ಕೊಡುವ ಪ್ರತಿದಂಡನೆಯನ್ನು ನಾನು ಕಾಣುವೆನು. ನಿನಗೆ ನನ್ನ ವ್ಯಾಜ್ಯವನ್ನು ಪ್ರಕಟಮಾಡಿದ್ದೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನನ್ನ ಗುಡಾರವು ಹಾಳಾಗಿದೆ, ಹಗ್ಗಗಳು ಹರಿದುಹೋಗಿವೆ, ಮಕ್ಕಳು ನನ್ನೊಳಗಿಂದ ತೊಲಗಿ ಇಲ್ಲವಾಗಿದ್ದಾರೆ; ನನ್ನ ಗುಡಾರವನ್ನು ಹಾಕುವದಕ್ಕೂ ನನ್ನ ಪರದೆಗಳನ್ನು ಬಿಗಿಯುವದಕ್ಕೂ ಇನ್ನು ಯಾರೂ ಇರುವದಿಲ್ಲ.
Kannada Bible (KNCL) BSI 2016
ನನ್ನ ಗುಡಾರ ಹಾಳಾಗಿದೆ, ಹಗ್ಗಗಳು ಕಿತ್ತುಹೋಗಿವೆ. ಮಕ್ಕಳು ನನ್ನನ್ನು ಬಿಟ್ಟು ಕಾಣದೆಹೋಗಿದ್ದಾರೆ ಗುಡಾರ ಹಾಕಲು, ಪರದೆ ಬಿಗಿಯಲು, ಯಾರೂ ಇಲ್ಲವಾಗಿದ್ದಾರೆ.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನನ್ನ ಗುಡಾರವು ಸೂರೆಯಾಯಿತು; ನನ್ನ ಹಗ್ಗಗಳೆಲ್ಲಾ ಹರಿದಿವೆ. ನನ್ನ ಮಕ್ಕಳು ನನ್ನನ್ನು ಬಿಟ್ಟು ಹೋಗಿದ್ದಾರೆ; ಅವರು ಇಲ್ಲ. ಇನ್ನು ಮೇಲೆ ನನ್ನ ಡೇರೆಯನ್ನು ಹರಡುವುದಕ್ಕೂ, ನನ್ನ ಪರದೆಗಳನ್ನು ನಿಲ್ಲಿಸುವುದಕ್ಕೂ ಒಬ್ಬನೂ ಇಲ್ಲ.