Jeremiah 12:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯಾವ ಜನಾಂಗವಾದರೂ ನನ್ನ ಸಂದೇಶವನ್ನು ಕೇಳದೆಹೋದರೆ ಅದನ್ನು ಸಂಪೂರ್ಣವಾಗಿ ನಾಶಮಾಡುವೆನು. ಒಣಗಿ ಸತ್ತುಹೋದ ಸಸಿಯಂತೆ ಅದನ್ನು ಕಿತ್ತು ಎಸೆದುಬಿಡುವೆನು.” ಇದು ಯೆಹೋವನಿಂದ ಘಂದ ಸಂದೇಶ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ಯಾವ ಜನಾಂಗವು ಕೇಳುವುದಿಲ್ಲವೋ ಅದನ್ನು ನಾನು ಕಿತ್ತುಹಾಕುವೆನು, ಹೌದು, ಕಿತ್ತುಹಾಕಿ ನಾಶ ಮಾಡುವೆನು ಎಂಬುದು ಯೆಹೋವನ ನುಡಿ” ಎಂದು ಹೇಳುತ್ತಾನೆ.
Kannada BSI Bible 2016
ಆದರೆ ನೀವು ಅದನ್ನು ಕೇಳದೆ ಹೋದರೆ ನನ್ನ ಪ್ರಾಣವು ನಿಮ್ಮ ಗರ್ವದ ನಿಮಿತ್ತ ಅಂತರಂಗದ ಸ್ಥಳಗಳಲ್ಲಿ ಅಳು ವದು. ನನ್ನ ಆತ್ಮವು ಬಹಳವಾಗಿ ದುಃಖಿಸುವದು; ಕಣ್ಣೀರು ಬಹಳವಾಗಿ ಸುರಿಸುವದು; ಕರ್ತನ ಮಂದೆಯು ಸೆರೆಯಾಗಿ ಒಯ್ಯಲ್ಪಟ್ಟಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಯಾವ ಜನಾಂಗವು ಕೇಳುವದಿಲ್ಲವೋ ಅದನ್ನು ನಾನು ಕಿತ್ತುಹಾಕುವೆನು, ಹೌದು, ಕಿತ್ತುಹಾಕಿ ನಾಶಮಾಡುವೆನು ಎಂಬದು ಯೆಹೋವನ ನುಡಿ.
Kannada Bible (KNCL) BSI 2016
ಆದರೆ ಯಾವ ಜನಾಂಗ ಕೇಳುವುದಿಲ್ಲವೋ ಅದನ್ನು ನಾನು ಕಿತ್ತುಹಾಕುವೆನು. ಹೌದು, ಬೇರುಸಹಿತ ಕಿತ್ತುಹಾಕಿ ನಾಶಮಾಡುವೆನು. ಇದು ಸರ್ವೇಶ್ವರನಾದ ನನ್ನ ನುಡಿ.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಅವರು ಕೇಳದೆ ಹೋದರೆ, ಆ ಜನಾಂಗವನ್ನು ಸಂಪೂರ್ಣವಾಗಿ ಕಿತ್ತು ನಾಶಮಾಡುವೆನು,” ಎಂದು ಯೆಹೋವ ದೇವರು ನುಡಿಯುತ್ತಾರೆ.