Jeremiah 12:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೀನು ಆ ದುಷ್ಟರನ್ನು ಇಲ್ಲಿ ಇಟ್ಟಿರುವೆ. ಅವರು ಆಳವಾಗಿ ಙೇರುಬಿಟ್ಟ ಸಸಿಗಳಂತಿದ್ದಾರೆ, ಅವು ಬೆಳೆಯುತ್ತವೆ, ಹಣ್ಣು ಬಿಡುತ್ತವೆ. ನೀನು ಅವರಿಗೆ ತುಂಬ ಹತ್ತಿರದವನು ಮತ್ತು ಪ್ರೀತಿಪಾತ್ರನು ಎಂದು ಅವರು ಬಾಯಿಂದ ಹೇಳುತ್ತಾರೆ. ಆದರೆ ಹೃದಯದಲ್ಲಿ ಅವರು ನಿನ್ನಿದ ತುಂಬಾ ದೂರದಲ್ಲಿದ್ದಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದ್ರೋಹಿಗಳೆಲ್ಲರೂ ನೆಮ್ಮದಿಯಾಗಿರುವುದೇಕೆ? ನೀನು ಅವರನ್ನು ನೆಟ್ಟಿದ್ದಿ, ಅವರು ಬೇರೂರಿ ಬೆಳೆದು ಹಣ್ಣು ಬಿಟ್ಟಿದ್ದಾರೆ. ನೀನು ಅವರ ಬಾಯಿಗೆ ಸಮೀಪ, ಅಂತರಿಂದ್ರಿಯಕ್ಕೆ ದೂರ.
Kannada BSI Bible 2016
ಆಗ ಕರ್ತನ ಮಾತಿನ ಪ್ರಕಾರ ನಾನು ಆ ದಟ್ಟಿಯನ್ನು ತಕ್ಕೊಂಡು ನನ್ನ ನಡುವಿಗೆ ಕಟ್ಟಿಕೊಂಡೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಅವರನ್ನು ನಾಟಿದ್ದೀ, ಅವರು ಬೇರೂರಿ ಬೆಳೆದು ಹಣ್ಣುಬಿಟ್ಟಿದ್ದಾರೆ; ನೀನು ಅವರ ಬಾಯಿಗೆ ಸಮೀಪ, ಅಂತರಿಂದ್ರಿಯಕ್ಕೆ ದೂರ.
Kannada Bible (KNCL) BSI 2016
ಅವರನ್ನು ನಾಟಿಮಾಡಿದವರು ನೀವು ಬೇರೂರಿ ಬೆಳೆದು ಹಣ್ಣುಬಿಡುತ್ತಿದ್ದಾರೆ ಅವರು. ನೀವು ಅವರ ಅಧರಕ್ಕೆ ಹತ್ತಿರ, ಹೃದಯಕ್ಕೆ ದೂರ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದ್ರೋಹಿಗಳೆಲ್ಲರೂ ನೆಮ್ಮದಿಯಾಗಿರುವುದು ಏಕೆ? ನೀವು ಅವರನ್ನು ನಾಟಿದ್ದೀರಿ, ಅವರು ಬೇರೂರಿ ಬೆಳೆದು ಹಣ್ಣು ಬಿಟ್ಟಿದ್ದಾರೆ, ನೀವು ಅವರ ಬಾಯಿಗೆ ಸಮೀಪ, ಅಂತರಿಂದ್ರಿಯಕ್ಕೆ ದೂರ.