Jeremiah 13:25 — Compare Translations
5 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿಮ್ಮ ಗತಿ ಹೀಗಾಗುವುದು. ನನ್ನ ಯೋಜನೆಗಳಲ್ಲಿ ಇದು ನಿಮ್ಮ ಪಾತ್ರ.” ಇದು ಯೆಹೋವನ ನುಡಿ. “ಏಕೆ ಹೀಗಾಗುವದು? ಏಕೆಂದರೆ ನೀವು ನನ್ನನ್ನು ಮರೆತುಬಿಟ್ಟಿರಿ. ಸುಳ್ಳುದೇವರುಗಳನ್ನು ನಂಬಿದಿರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ನನ್ನನ್ನು ಮರೆತು ಸುಳ್ಳನ್ನು ನಂಬಿದ್ದರಿಂದ ಇದೇ ನಿನ್ನ ಪಾಲು, ಇದೇ ನಾನು ನಿನಗೆ ಅಳೆದುಕೊಟ್ಟ ಭಾಗ ಎಂದು ಯೆಹೋವನು ನುಡಿಯುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ನನ್ನನ್ನು ಮರೆತು ಸುಳ್ಳನ್ನು ನಂಬಿದ್ದರಿಂದ ಇದೇ ನಿನ್ನ ಪಾಲು, ಇದೇ ನಾನು ನಿನಗೆ ಅಳೆದುಕೊಟ್ಟ ಭಾಗ ಎಂದು ಯೆಹೋವನು ಅನ್ನುತ್ತಾನೆ.
Kannada Bible (KNCL) BSI 2016
ನೀನು ನನ್ನನ್ನು ಮರೆತುಬಿಟ್ಟು ಸುಳ್ಳನ್ನು ನಂಬಿದ್ದರಿಂದ ಇದೇ ನಿನಗೆ ಒದಗಲಿರುವ ಗತಿ. ಇದೇ ನಾನು ನಿನಗೆ ಅಳೆದುಕೊಡುವ ಪ್ರತೀಕಾರ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದೇ ನಿನ್ನ ಭಾಗವು, ನನ್ನಿಂದ ನಿನಗೆ ಅಳತೆ ಮಾಡಿದ ಪಾಲು,” ಎಂದು ಯೆಹೋವ ದೇವರು ಹೇಳುತ್ತಾರೆ. “ಏಕೆಂದರೆ ನನ್ನನ್ನು ಮರೆತುಬಿಟ್ಟು, ಸುಳ್ಳು ದೇವರುಗಳಲ್ಲಿ ಭರವಸೆಯಿಟ್ಟಿದ್ದೀಯೇ.