Jeremiah 15:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೂದದ ಜನರಲ್ಲಿ ಅನೇಕ ಭಂಡಾರಗಳಿವೆ. ಆ ಭಂಡಾರಗಳನ್ನು ನಾನು ಬೇರೆಯವರಿಗೆ ಒಪ್ಪಿಸುತ್ತೇನೆ. ಬೇರೆಯವರು ಆ ಭಂಡಾರಗಳನ್ನು ಹಣ ಕೊಟ್ಟು ತೆಗೆದುಕೊಳ್ಳಙೇಕಾಗಿಲ್ಲ. ನಾನು ಅವರಿಗೆ ಅವುಗಳನ್ನು ಉಚಿತವಾಗಿ ಕೊಟ್ಟುಬಿಡುತ್ತೇನೆ. ಏಕೆಂದರೆ ಯೆಹೂದವು ಅನೇಕ ಪಾಪಗಳನ್ನು ಮಾಡಿದೆ. ದೇಶದ ಪ್ರತಿಯೊಂದು ಭಾಗದಲ್ಲಿಯೂ ಯೆಹೂದ ಪಾಪಮಾಡಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನಿನ್ನ ಸಕಲ ಪ್ರಾಂತ್ಯಗಳಲ್ಲಿ ನೀನು ಮಾಡಿದ ಎಲ್ಲಾ ಪಾಪಗಳ ನಿಮಿತ್ತ ನಾನು ನಿನ್ನ ಸೊತ್ತು ಮತ್ತು ಸಂಪತ್ತುಗಳನ್ನು ಲಾಭವಿಲ್ಲದೆ ಸೂರೆಗೆ ಈಡುಮಾಡಿ,
Kannada BSI Bible 2016
ಆದದರಿಂದ ನಾನು ನಿಮ್ಮನ್ನು ಈ ದೇಶದೊಳಗಿಂದ ಬಿಸಾಡಿ ನಿಮಗೂ ನಿಮ್ಮ ತಂದೆಗಳಿಗೂ ತಿಳಿಯದ ದೇಶಕ್ಕೆ ಎಸೆಯುವೆನು; ಅಲ್ಲಿ ನೀವು ರಾತ್ರಿ ಹಗಲು ಬೇರೆ ದೇವರುಗಳಿಗೆ ಸೇವೆಮಾಡುವಿರಿ ನಾನು ನಿಮಗೆ ಕನಿಕರ ತೋರಿಸುವದಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿನ್ನ ಸಕಲ ಪ್ರಾಂತ್ಯಗಳಲ್ಲಿ ನೀನು ಮಾಡಿದ ಎಲ್ಲಾ ಪಾಪಗಳ ನಿವಿುತ್ತ ನಾನು ನಿನ್ನ ಸೊತ್ತು ಸಂಪತ್ತುಗಳನ್ನು ಲಾಭವಿಲ್ಲದೆ ಸೂರೆಗೆ ಈಡುಮಾಡಿ
Kannada Bible (KNCL) BSI 2016
ಸರ್ವೇಶ್ವರ: “ನಾಡಿನಾದ್ಯಂತ ನನ್ನ ಜನರು ಮಾಡಿದ ಎಲ್ಲ ಪಾಪಗಳ ನಿಮಿತ್ತ ಅವರ ಸೊತ್ತು ಸಂಪತ್ತನ್ನು ಪುಕ್ಕಟೆಯಾಗಿ ಕೊಳ್ಳೆಗಾರರ ಪಾಲಾಗಿಸುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿನ್ನ ಸಕಲ ಪ್ರಾಂತಗಳಲ್ಲಿ ನೀನು ಮಾಡಿದ ಎಲ್ಲಾ ಪಾಪಗಳ ನಿಮಿತ್ತ ನಾನು ನಿನ್ನ ಸೊತ್ತು ಸಂಪತ್ತುಗಳನ್ನು ಲಾಭವಿಲ್ಲದೆ ಸೂರೆಗೆ ಈಡು ಮಾಡಿ,