Jeremiah 15:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅನೇಕ ಹೆಂಗಸರು ತಮ್ಮ ಗಂಡಂದಿರನ್ನು ಕಳೆದುಕೊಳ್ಳುವರು. ಸಮುದ್ರದಡದಲ್ಲಿದ್ದ ಮರಳು ಕಣಗಳಿಗಿಂತ ವಿಧವೆಯರ ಸಂಖ್ಯೆ ಹೆಚ್ಚಾಗುವುದು. ಮಧ್ಯಾಹಐದಲ್ಲಿಯೇ ನಾನು ಘಾತುಕನನ್ನು ತರುವೆನು. ಆ ಘಾತುಕನು ಯೆಹೂದದ ತಾಯಂದಿರ ಮೇಲೆರಗುವನು. ನಾನು ಯೆಹೂದದ ಜನರಿಗೆ ನೋವನ್ನು ಮತ್ತು ಭಯವನ್ನು ತರುವೆನು; ಅತೀ ಶೀಘ್ರದಲ್ಲಿಯೇ ಹೀಗಾಗುವಂತೆ ಮಾಡುವೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರ ವಿಧವೆಯರು ನನ್ನ ಭಾಗಕ್ಕೆ ಸಮುದ್ರದ ಉಸುಬಿಗಿಂತ ಹೆಚ್ಚಾಗಿರುವರು. ಯುವಕರ ಮತ್ತು ತಾಯಂದಿರ ಮೇಲೆ ಕೊಳ್ಳೆ ಹೊಡೆಯುವವನನ್ನು ಮಧ್ಯಾಹ್ನದಲ್ಲೇ ಬರಮಾಡುವೆನು. ಅವರ ಮೇಲೆ ಕಳವಳವನ್ನು ಮತ್ತು ದಿಗಿಲನ್ನು ತಟ್ಟನೆ ಬೀಳಿಸುವೆನು.
Kannada BSI Bible 2016
ಅವರ ಸಂಗಡ ಕೂತುಕೊಂಡು ಉಣ್ಣುವದಕ್ಕೂ ಕುಡಿಯುವದಕ್ಕೂ ಔತಣದ ಮನೆಯಲ್ಲಿ ಪ್ರವೇಶಿಸ ಬೇಡ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರ ವಿಧವೆಯರು ನನ್ನ ಭಾಗಕ್ಕೆ ಸಮುದ್ರದ ಉಸುಬಿಗಿಂತ ಹೆಚ್ಚಾಗಿರುವರು; ಯುವಕರ ತಾಯಿಗಳ ಮೇಲೆ ಕೊಳ್ಳೆಹೊಡೆಯುವವನನ್ನು ಮಧ್ಯಾಹ್ನದಲ್ಲೇ ಬರಮಾಡುವೆನು; ಅವರ ಮೇಲೆ ಕಳವಳವನ್ನೂ ದಿಗಿಲನ್ನೂ ತಟ್ಟನೆ ಬೀಳಿಸುವೆನು.
Kannada Bible (KNCL) BSI 2016
ಅವರ ವಿಧವೆಯರು ನನ್ನ ಭಾಗಕ್ಕೆ ಕಡಲ ಮರಳಿನಂತೆ ಯುವಜನರಿಗೆ ಸಾವು ಬರಮಾಡಿದೆ ನಡುಜೀವನದಲ್ಲೆ. ಅವರ ತಾಯಂದಿರನ್ನು ದುಃಖಕ್ಕೆ ಈಡುಮಾಡಿದೆ ತಟ್ಟನೆ ಅವರನ್ನು ಕಳವಳಕ್ಕೂ ದಿಗಿಲಿಗೂ ಗುರಿಪಡಿಸಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರ ವಿಧವೆಯರು ನನ್ನ ಭಾಗಕ್ಕೆ ಸಮುದ್ರದ ಉಸುಕಿಗಿಂತ ಹೆಚ್ಚಾಗಿರುವರು, ಯುವಕರ ತಾಯಿಗಳ ಮೇಲೆ ನಾಶ ಮಾಡುವವನನ್ನು ಮಧ್ಯಾಹ್ನದಲ್ಲೇ ಬರಮಾಡುವೆನು, ಅವರ ಮೇಲೆ ಕಳವಳವನ್ನೂ, ದಿಗಿಲನ್ನೂ ತಟ್ಟನೆ ಬೀಳಿಸುವೆನು.