Jeremiah 16:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರು ಮಾಡುವ ಪಾಪಕೃತ್ಯಗಳು ನನಗೆ ಕಾಣಿಸುತ್ತಿವೆ. ಯೆಹೂದದ ಜನರು ತಾವು ಮಾಡುವದನ್ನು ನನ್ನಿದ ಮುಚ್ಚಿಡಲು ಸಾಧ್ಯವಿಲ್ಲ. ಅವರ ಪಾಪವು ನನಗೆ ಗೊತ್ತಾಗುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಅವರ ನಡತೆಯನ್ನೆಲ್ಲಾ ದೃಷ್ಟಿಸುತ್ತೇನೆ, ಅದು ನನ್ನ ಮುಖಕ್ಕೆ ಮರೆಯಾಗಿಲ್ಲ; ಅವರ ಅಧರ್ಮವು ನನಗೆ ಗುಟ್ಟಾಗಿ ಇಲ್ಲ, ಪ್ರತ್ಯಕ್ಷವಾಗೇ ಇದೆ.
Kannada BSI Bible 2016
ನೀನು ನನಗೆ ಭಯಾಸ್ಪದವಾಗಬೇಡ; ಕೆಟ್ಟ ದಿನದಲ್ಲಿ ನೀನೇ ನನ್ನ ನಿರೀಕ್ಷೆಯು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರ ನಡತೆಯನ್ನೆಲ್ಲಾ ದೃಷ್ಟಿಸುತ್ತೇನೆ, ಅದು ನನ್ನ ಮುಖಕ್ಕೆ ಮರೆಯಾಗಿಲ್ಲ; ಅವರ ಅಧರ್ಮವು ನನಗೆ ಗುಟ್ಟಲ್ಲ, ಪ್ರತ್ಯಕ್ಷದಲ್ಲೇ ಇದೆ.
Kannada Bible (KNCL) BSI 2016
ಈ ಜನರ ನಡತೆ ನನ್ನ ಮುಖಕ್ಕೆ ಮರೆಯಾಗಿಲ್ಲ, ಎಲ್ಲವು ನನ್ನ ಕಣ್ಣಿಗೆ ಕಟ್ಟಿದಂತಿದೆ. ಅವರ ಅಕ್ರಮ ನನಗೆ ಗುಟ್ಟೇನೂ ಅಲ್ಲ, ಎಲ್ಲವು ಬಟ್ಟಬಯಲಾಗಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನನ್ನ ಕಣ್ಣುಗಳು ಅವರ ಎಲ್ಲಾ ಮಾರ್ಗಗಳ ಮೇಲೆ ಇವೆ. ಅವು ನನ್ನ ಮುಖಕ್ಕೆ ಮರೆಯಾದವುಗಳಲ್ಲ, ಅವರ ಅಕ್ರಮವು ನನ್ನ ದೃಷ್ಟಿಗೆ ಅಡಗಿರುವುದಿಲ್ಲ.