Jeremiah 17:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನೇ, ನೀನು ನನ್ನನ್ನು ವಾಸಿಮಾಡಿದರೆ ನಿಜವಾಗಿಯೂ ನಾನು ಗುಣಹೊಂದುತ್ತೇನೆ. ನನ್ನನ್ನು ರಕ್ಷಿಸು, ಆಗ ನಿಜವಾಗಿಯೂ ರಕ್ಷಣೆ ಹೊಂದಿದವನಾಗುವೆನು. ಯೆಹೋವನೇ, ನಾನು ನಿನ್ನನ್ನು ಸ್ತುತಿಸುತ್ತೇನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನೇ, ನನ್ನನ್ನು ಸ್ವಸ್ಥಪಡಿಸು, ಆಗ ಸ್ವಸ್ಥನಾಗುವೆನು. ನನ್ನನ್ನು ರಕ್ಷಿಸು, ಆಗ ರಕ್ಷಿಸಲ್ಪಡುವೆನು; ನೀನೇ ನನಗೆ ಸ್ತುತ್ಯನು.
Kannada BSI Bible 2016
ಒಬ್ಬನು ಹೊಲದ ಬಂಡೆಯಿಂದ ಬರುವ ಲೆಬನೋನಿನ ಹಿಮ ವನ್ನು ಬಿಡುವನೋ? ಇಲ್ಲದೆ ಇನ್ನೊಂದು ಸ್ಥಳದಿಂದ ಬರುವ ತಂಪಾದ ಪ್ರವಾಹದ ನೀರು ತಳ್ಳಲ್ಪಡು ವದೋ?
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನೇ, ನನ್ನನ್ನು ಸ್ವಸ್ಥಪಡಿಸು, ಆಗ ಸ್ವಸ್ಥನೇ ಆಗುವೆನು; ನನ್ನನ್ನು ರಕ್ಷಿಸು, ಆಗ ರಕ್ಷಿತನೇ ಆಗುವೆನು; ನೀನೇ ನನಗೆ ಸ್ತುತ್ಯನು.
Kannada Bible (KNCL) BSI 2016
ಹೇ ಸರ್ವೇಶ್ವರಾ, ನನ್ನನ್ನು ಸ್ವಸ್ಥಪಡಿಸಿರಿ, ನಾನು ಸ್ವಸ್ಥನಾಗುವೆನು. ನನ್ನನ್ನು ರಕ್ಷಿಸಿರಿ, ನಾನು ರಕ್ಷಿತನಾಗಿಯೆ ತೀರುವೆನು. ನೀವೇ ನನಗೆ ಸ್ತುತ್ಯಾರ್ಹರು!
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರೇ, ನನ್ನನ್ನು ಸ್ವಸ್ಥಮಾಡಿ, ಆಗ ಸ್ವಸ್ಥವಾಗುವೆನು. ನನ್ನನ್ನು ರಕ್ಷಿಸು, ಆಗ ರಕ್ಷಿತನಾಗುವೆನು. ಏಕೆಂದರೆ, ನೀವೇ ನನಗೆ ಸ್ತುತ್ಯರು.