Jeremiah 17:22 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸಬ್ಬತ್‌ದಿನದಂದು ನಿಮ್ಮ ಮನೆಯಿಂದ ಯಾವ ಹೊರೆಯನ್ನೂ ಈಚೆಗೆ ತೆಗೆದುಕೊಂಡು ಬರಬೇಡಿರಿ. ಆ ದಿನ ಯಾವ ಕೆಲಸವನ್ನೂ ಮಾಡಙೇಡಿರಿ. ಸಬ್ಬತ್‌ದಿನವನ್ನು ನೀವು ಪವಿತ್ರದಿನವನ್ನಾಗಿ ಮಾಡಬೇಕು. ನಾನು ನಿಮ್ಮ ಪೂರ್ವಿಕರಿಗೆ ಇದೇ ಆದೇಶವನ್ನು ಕೊಟ್ಟೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ದಿನದಲ್ಲಿ ನಿಮ್ಮ ಮನೆಗಳಿಂದ ಯಾವ ಹೊರೆಯನ್ನೂ ಈಚೆಗೆ ತೆಗೆದುಕೊಂಡು ಬರಬೇಡಿರಿ, ಯಾವ ಕೆಲಸವನ್ನೂ ಮಾಡದಿರಿ. ಸಬ್ಬತ್ ದಿನವನ್ನು ನನ್ನ ಪರಿಶುದ್ಧ ದಿನವೆಂದು ಆಚರಿಸಿರಿ; ನಿಮ್ಮ ಪೂರ್ವಿಕರಿಗೆ ನಾನು ಹೀಗೆ ಆಜ್ಞೆಮಾಡಿದೆನಲ್ಲಾ.
Kannada BSI Bible 2016
ನೀನು ಅಕಸ್ಮಾತ್ತಾಗಿ ಅವರ ಮೇಲೆ ಸೈನ್ಯವನ್ನು ತರಿಸುವಾಗ ಕೂಗು ಅವರ ಮನೆಗಳೊಳಗಿಂದ ಕೇಳಬರಲಿ; ನನ್ನನ್ನು ಹಿಡಿಯು ವದಕ್ಕೆ ಕುಣಿ ಅಗೆದಿದ್ದಾರೆ; ನನ್ನ ಕಾಲುಗಳಿಗೆ ಉರ್ಲು ಗಳನ್ನು ಒಡ್ಡಿದ್ದಾರೆ.ಆದಾಗ್ಯೂ ಕರ್ತನೇ, ಅವರು ನನ್ನನ್ನು ಸಾಯಿಸುವದಕ್ಕೆ ನನಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೆಲ್ಲಾ ನೀನು ಬಲ್ಲೆ; ಅವರ ಅಕ್ರಮವನ್ನು ಮನ್ನಿಸಬೇಡ; ಪಾಪವನ್ನು ನಿನ್ನ ಸನ್ನಿಧಿ ಯೊಳಗಿಂದ ಅಳಿಸಿಬಿಡಬೇಡ; ಅವರು ನಿನ್ನ ಮುಂದೆ ಕೆಡವಲ್ಪಡಲಿ; ನಿನ್ನ ಕೋಪದ ಕಾಲದಲ್ಲಿ ಅವರಿಗೆ ಹಾಗೆ ಮಾಡು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ದಿನದಲ್ಲಿ ನಿಮ್ಮ ಮನೆಗಳಿಂದ ಯಾವ ಹೊರೆಯನ್ನೂ ಈಚೆಗೆ ತೆಗೆದುಕೊಂಡು ಬರಬೇಡಿರಿ, ಯಾವ ಕೆಲಸವನ್ನೂ ಮಾಡದಿರಿ; ಸಬ್ಬತ್ ದಿನವನ್ನು ನನ್ನ ದಿನವೆಂದು ಆಚರಿಸಿರಿ; ನಿಮ್ಮ ಪಿತೃಗಳಿಗೆ ನಾನು ಹೀಗೆ ಆಜ್ಞೆಮಾಡಿದೆನಲ್ಲಾ;
Kannada Bible (KNCL) BSI 2016
ಆ ಸಬ್ಬತ್ ದಿನದಲ್ಲಿ ನಿಮ್ಮ ಮನೆಗಳಿಂದ ಯಾವ ಹೊರೆಯನ್ನೂ ಈಚೆಗೆ ತೆಗೆದುಕೊಂಡು ಬರಬೇಡಿ. ಯಾವ ಕೆಲಸವನ್ನೂ ಮಾಡದಿರಿ. ನಾನು ನಿಮ್ಮ ಪೂರ್ವಜರಿಗೆ ಆಜ್ಞೆಮಾಡಿದಂತೆ ಸಬ್ಬತ್ ದಿನವನ್ನು ಪವಿತ್ರ ದಿನವನ್ನಾಗಿ ಆಚರಿಸಿರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸಬ್ಬತ್ ದಿನದಲ್ಲಿ ಹೊರೆಯನ್ನು ನಿಮ್ಮ ಮನೆಗಳಿಂದ ತೆಗೆದುಕೊಂಡು ಹೋಗಬೇಡಿರಿ. ಯಾವ ಕೆಲಸವನ್ನೂ ಮಾಡಬೇಡಿರಿ. ನಾನು ನಿಮ್ಮ ಪಿತೃಗಳಿಗೆ ಆಜ್ಞಾಪಿಸಿದ ಪ್ರಕಾರವೇ, ಸಬ್ಬತ್ ದಿನವನ್ನು ಪರಿಶುದ್ಧವಾಗಿಡಬೇಕು.