Jeremiah 17:24 — Compare Translations

5 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ನೀವು ಎಚ್ಚರಿಕೆಯಿಂದ ನನ್ನ ಆಜ್ಞೆಯನ್ನು ಪಾಲಿಸಬೇಕು.”‘ ಇದು ಯೆಹೋವನ ನುಡಿ. “‘ನೀವು ಸಬ್ಬತ್‌ದಿನದಂದು ಜೆರುಸಲೇಮಿನ ದ್ವಾರಗಳ ಮೂಲಕ ಯಾವ ಭಾರವನ್ನೂ ತರಬಾರದು. ಸಬ್ಬತ್‌ದಿನವನ್ನು ನೀವು ಪವಿತ್ರದಿನವನ್ನಾಗಿ ಮಾಡಬೇಕು. ಆ ದಿನ ನೀವು ಯಾವ ಕೆಲಸವನ್ನೂ ಮಾಡಬಾರದು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನಾದ ನನ್ನ ನುಡಿ ಇದೇ, ನೀನು ನನ್ನ ಕಡೆಗೆ ಚೆನ್ನಾಗಿ ಕಿವಿಗೊಟ್ಟು, ಸಬ್ಬತ್ ದಿನದಲ್ಲಿ ಈ ಊರಿನ ಬಾಗಿಲುಗಳೊಳಗೆ ಯಾವ ಹೊರೆಯನ್ನೂ ತಾರದೆ, ಯಾವ ಕೆಲಸವನ್ನೂ ಮಾಡದೆ, ಆ ದಿನವನ್ನು ನನ್ನ ಪರಿಶುದ್ಧ ದಿನವೆಂದು ಆಚರಿಸಿದರೆ,
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನಾದ ನನ್ನ ನುಡಿ ಇದೇ - ನೀವು ನನ್ನ ಕಡೆಗೆ ಚೆನ್ನಾಗಿ ಕಿವಿಗೊಟ್ಟು ಸಬ್ಬತ್ ದಿನದಲ್ಲಿ ಈ ಊರಿನ ಬಾಗಿಲುಗಳೊಳಗೆ ಯಾವ ಹೊರೆಯನ್ನೂ ತಾರದೆ ಯಾವ ಕೆಲಸವನ್ನೂ ಮಾಡದೆ ಆ ದಿನವನ್ನು ನನ್ನ ದಿನವೆಂದು ಆಚರಿಸಿದರೆ
Kannada Bible (KNCL) BSI 2016
“ಸರ್ವೇಶ್ವರನಾದ ನಾನು ಹೇಳುವ ಮಾತಿದು: ನೀವು ನನ್ನ ಕಡೆಗೆ ಚೆನ್ನಾಗಿ ಕಿವಿಗೊಟ್ಟು ಸಬ್ಬತ್ ದಿನದಲ್ಲಿ ಈ ಊರಿನ ಬಾಗಿಲುಗಳೊಳಗೆ ಯಾವ ಹೊರೆಯನ್ನು ತರದೆ, ಯಾವ ಕೆಲಸವನ್ನೂ ಮಾಡದೆ, ಆ ದಿನವನ್ನು ಪವಿತ್ರವಾಗಿ ಆಚರಿಸಿದರೆ,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರಾದ ನನ್ನ ನುಡಿ ಇದೇ: ನೀವು ನನ್ನನ್ನು ಜಾಗ್ರತೆಯಿಂದ ಕೇಳಿ, ಸಬ್ಬತ್ ದಿನದಲ್ಲಿ, ಈ ಪಟ್ಟಣದ ಬಾಗಿಲುಗಳಲ್ಲಿ ಹೊರೆಯನ್ನು ತೆಗೆದುಕೊಂಡು ಬಾರದೆ, ಸಬ್ಬತ್ ದಿನದಲ್ಲಿ ಯಾವುದೊಂದು ಕೆಲಸಮಾಡದೆ ಪರಿಶುದ್ಧಮಾಡಿದರೆ,