Jeremiah 18:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಆ ಜನಾಂಗದ ಜನರು ತಮ್ಮ ಮನಸ್ಸನ್ನು ಮತ್ತು ಜೀವನವನ್ನು ಪರಿವರ್ತಿಸಿಕೊಳ್ಳಘಹುದು. ಆ ಜನಾಂಗದ ಜನರು ಮಾಡುವ ದುಷ್ಕೃತ್ಯಗಳನ್ನು ನಿಲ್ಲಿಸಘಹುದು. ಆಗ ನಾನು ನನ್ನ ವಿಚಾರವನ್ನು ಘದಲಾಯಿಸಿ, ಆ ಜನಾಂಗವನ್ನು ನಾಶಪಡಿಸಙೇಕೆಂದು ಮಾಡಿದ ನನ್ನ ಮುಂಚಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತರದಿರಘಹುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ದಂಡನೆಯನ್ನು ನಿರ್ಣಯಿಸಿದ ಆ ಜನಾಂಗದವರು ತಮ್ಮ ಕೆಟ್ಟತನದಿಂದ ತಿರುಗಿಕೊಂಡರೆ, ನಾನು ಮಾಡಬೇಕೆಂದಿದ್ದ ಕೇಡನ್ನು ಮನಮರುಗಿ ಮಾಡದಿರುವೆನು.
Kannada BSI Bible 2016
ಈ ಪಟ್ಟಣಗಳನ್ನು ಹಾಳಾಗಿಯೂ ತಿರಸ್ಕರಿಸಲ್ಪಡುವಂತೆಯೂ ಮಾಡುವೆನು; ಅದನ್ನು ಹಾದುಹೋಗುವವರೆಲ್ಲರು ಅದರ ಎಲ್ಲಾ ಬಾಧೆಗಳ ನಿಮಿತ್ತ ವಿಸ್ಮಯಹೊಂದಿ ಸಿಳ್ಳು ಹಾಕುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ದಂಡನೆ ನಿರ್ಣಯಿಸಿದ ಆ ಜನಾಂಗದವರು ತಮ್ಮ ಕೆಟ್ಟತನದಿಂದ ತಿರುಗಿಕೊಂಡರೆ ನಾನು ಮಾಡಬೇಕೆಂದಿದ್ದ ಕೇಡನ್ನು ಮನಮರುಗಿ ಮಾಡದಿರುವೆನು.
Kannada Bible (KNCL) BSI 2016
ದಂಡನೆಗೆ ನಿರ್ಣಯಿಸಲಾದ ಆ ಜನಾಂಗದವರು ತಮ್ಮ ಕೆಟ್ಟತನವನ್ನು ಬಿಟ್ಟು ಹಿಂತಿರುಗಿದ್ದೇ ಆದರೆ ನಾನು ಬರಮಾಡಬೇಕೆಂದಿದ್ದ ಆ ವಿಪತ್ತನ್ನು ನಾನು ಮನಮರುಗಿ ಬರಮಾಡದಿರುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಆ ಜನಾಂಗಕ್ಕೆ ವಿರೋಧವಾಗಿ ಮಾತನಾಡಿದ ತನ್ನ ಕೆಟ್ಟತನವನ್ನು ಬಿಟ್ಟು ತಿರುಗಿದರೆ, ನಾನು ಅದಕ್ಕೆ ಮಾಡಬೇಕೆಂದು ಯೋಚಿಸಿದ ಕೆಟ್ಟದ್ದನ್ನು ಕುರಿತು ಮನಸ್ಸನ್ನು ಬದಲಾಯಿಸುವೆನು.