Jeremiah 19:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾನು ಈ ಜನರಿಗೂ ಮತ್ತು ಈ ಸ್ಥಳಕ್ಕೂ ಹೀಗೆ ಮಾಡುತ್ತೇನೆ. ನಾನು ಈ ನಗರವನ್ನು ತೋಫೆತಿನಂತೆ ಮಾಡುತ್ತೇನೆ’ ಇದು ಯೆಹೋವನ ನುಡಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಈ ಸ್ಥಳವನ್ನೂ ಇದರ ನಿವಾಸಿಗಳನ್ನೂ ಹೀಗೆ ನಾಶಪಡಿಸಿ, ಈ ಪಟ್ಟಣವನ್ನು ತೋಫೆತಿನ ಸ್ಥಿತಿಗೆ ತರುವೆನು.
Kannada BSI Bible 2016
ಓ ಸೈನ್ಯಗಳ ಕರ್ತನೇ, ನೀತಿ ವಂತರನ್ನು ಶೋಧಿಸುವಾತನೇ, ಅಂತರಿಂದ್ರಿಯಗ ಳನ್ನೂ ಹೃದಯವನ್ನೂ ನೋಡುವಾತನೇ, ನೀನು ಅವರಿಗೆ ಪ್ರತಿದಂಡನೆ ಮಾಡುವದನ್ನು ನಾನು ನೋಡು ವಂತೆ ಮಾಡು. ನಿನಗೆ ನನ್ನ ವ್ಯಾಜ್ಯವನ್ನು ತಿಳಿಯ ಮಾಡಿದ್ದೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಈ ಸ್ಥಳವನ್ನೂ ಇದರ ನಿವಾಸಿಗಳನ್ನೂ ಹೀಗೆ ನಾಶಪಡಿಸಿ ಈ ಪಟ್ಟಣವನ್ನು ತೋಫೆತಿನ ಸ್ಥಿತಿಗೆ ತರುವೆನು;
Kannada Bible (KNCL) BSI 2016
ನಾನು ಈ ಸ್ಥಳವನ್ನೂ ಇದರ ನಿವಾಸಿಗಳನ್ನೂ ಅಷ್ಟರಮಟ್ಟಿಗೆ ನಾಶಪಡಿಸಿ ಈ ನಗರವನ್ನು ತೋಫೆತಿನ ಪರಿಸ್ಥಿತಿಗೆ ಇಳಿಸುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೀಗೆ ಈ ಸ್ಥಳಕ್ಕೂ, ಅದರ ನಿವಾಸಿಗಳಿಗೂ ಮಾಡುವೆನೆಂದು ಯೆಹೋವ ದೇವರು ಹೇಳುತ್ತಾರೆ. ಈ ಪಟ್ಟಣವನ್ನು ತೋಫೆತಿನ ಹಾಗೆಯೇ ಮಾಡುವೆನು.