Jeremiah 19:7 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈ ಸ್ಥಳದಲ್ಲಿ ನಾನು ಯೆಹೂದದ ಮತ್ತು ಜೆರುಸಲೇಮಿನ ಜನರ ಯೋಜನೆಗಳನ್ನು ಹಾಳು ಮಾಡುತ್ತೇನೆ. ಶತ್ರುವು ಈ ಜನರನ್ನು ಬೆನ್ನಟ್ಟಿ ಬರುವನು. ನಾನು ಈ ಸ್ಥಳದಲ್ಲಿ ಖಡ್ಗದಿಂದ ಯೆಹೂದದ ಜನರ ಕೊಲೆಯಾಗುವಂತೆ ಮಾಡುವೆನು. ಅವರ ಹೆಣಗಳು ಪಕ್ಷಿಗಳಿಗೆ ಮತ್ತು ಕಾಡುಪ್ರಾಣಿಗಳಿಗೆ ಆಹಾರವಾಗುವಂತೆ ಮಾಡುವೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಈ ಸ್ಥಳದಲ್ಲಿ ಯೆಹೂದ್ಯರ ಮತ್ತು ಯೆರೂಸಲೇಮಿನವರ ಆಲೋಚನೆಯನ್ನು ಮಣ್ಣುಪಾಲುಮಾಡಿ, ಅವರ ಪ್ರಾಣವನ್ನು ಹುಡುಕುವ ಶತ್ರುಗಳ ಖಡ್ಗದಿಂದ ಅವರನ್ನು ಬೀಳಿಸಿ, ಆ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ಮತ್ತು ಭೂಜಂತುಗಳಿಗೂ ಆಹಾರವನ್ನಾಗಿ ಮಾಡುವೆನು.
Kannada BSI Bible 2016
ಓ ಕರ್ತನೇ, ನೀನು ನನ್ನನ್ನು ವಂಚಿಸಿದಿ; ನಾನು ವಂಚಿಸಲ್ಪಟ್ಟೆನು. ನೀನು ನನಗಿಂತ ಬಲಿಷ್ಠನಾಗಿದ್ದು ಜಯಿಸಿದಿ; ನಾನು ಪ್ರತಿದಿನ ಪರಿಹಾಸ್ಯಕ್ಕೆ ಗುರಿ ಯಾಗಿದ್ದೇನೆ; ಪ್ರತಿಯೊಬ್ಬನು ನನ್ನನ್ನು ಹಾಸ್ಯಮಾಡು ತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಈ ಸ್ಥಳದಲ್ಲಿ ಯೆಹೂದ್ಯರ ಮತ್ತು ಯೆರೂಸಲೇವಿುನವರ ಆಲೋಚನೆಯನ್ನು ಚೆಲ್ಲಿ ಮಣ್ಣುಪಾಲುಮಾಡಿ ಅವರ ಪ್ರಾಣವನ್ನು ಹುಡುಕುವ ಶತ್ರುಗಳ ಖಡ್ಗದಿಂದ ಅವರನ್ನು ಬೀಳಿಸಿ ಆ ಹೆಣಗಳನ್ನು ಆಕಾಶಪಕ್ಷಿಗಳಿಗೂ ಭೂಜಂತುಗಳಿಗೂ ಆಹಾರವನ್ನಾಗಿ ಮಾಡುವೆನು.
Kannada Bible (KNCL) BSI 2016
ಈ ಸ್ಥಳದಲ್ಲಿ ಯೆಹೂದ್ಯರ ಮತ್ತು ಜೆರುಸಲೇಮಿನವರ ಯೋಜನೆಗಳನ್ನು ಮಣ್ಣುಪಾಲಾಗಿಸುವೆನು. ಅವರ ಶತ್ರುಗಳ ಹಾಗು ಕೊಲೆಗಡುಕರ ಕತ್ತಿಗೆ ಅವರನ್ನು ತುತ್ತಾಗಿಸುವೆನು. ಅವರ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ಭೂಜಂತುಗಳಿಗೂ ಆಹಾರವಾಗಿಸುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ನಾನು ಈ ಸ್ಥಳದಲ್ಲಿ ಯೆಹೂದದ, ಯೆರೂಸಲೇಮಿನ ಆಲೋಚನೆಯನ್ನು ಶೂನ್ಯ ಮಾಡುವೆನು. ಅವರ ಶತ್ರುಗಳ ಮುಂದೆಯೂ, ಅವರ ಪ್ರಾಣವನ್ನು ಹುಡುಕುವವರ ಕೈಯಿಂದಲೂ ಅವರನ್ನು ಖಡ್ಗದಿಂದ ಬೀಳುವಂತೆ ಮಾಡುವೆನು. ಅವರ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ, ಕಾಡುಮೃಗಗಳಿಗೂ ಆಹಾರವಾಗಿ ಕೊಡುವೆನು.