Jeremiah 19:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು ಈ ನಗರವನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ. ಜೆರುಸಲೇಮಿನಿಂದ ಹಾದುಹೋಗುವಾಗ ಜನರು ಸಿಳ್ಳುಹಾಕಿ ತಲೆಯಾಡಿಸಿ ಹೋಗುವರು. ನಗರವು ಹಾಳಾಗಿರುವುದನ್ನು ಕಂಡು ಅವರು ಬೆರಗಾಗುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಈ ಪಟ್ಟಣವನ್ನು ಬೆರಗಿನ ಸಿಳ್ಳಿಗೆ ಗುರಿಮಾಡುವೆನು; ಹಾದುಹೋಗುವವರೆಲ್ಲರೂ ಅದಕ್ಕೆ ಸಂಭವಿಸಿದ ವಿಪತ್ತುಗಳನ್ನು ಕಂಡು ಬೆರಗಾಗಿ ಸಿಳ್ಳುಹಾಕುವರು.
Kannada BSI Bible 2016
ನಾನು ಮಾತನಾಡುವನಾದದ್ದರಿಂದ ಗಟ್ಟಿಯಾಗಿ ಕೂಗುತ್ತೇನೆ; ಬಲಾತ್ಕಾರವೂ ಕೊಳ್ಳೆಯೂ ಎಂದು ಕೂಗುತ್ತೇನೆ ಕರ್ತನ ವಾಕ್ಯವು ನನಗೆ ಪ್ರತಿದಿನ ಪರಿಹಾಸ್ಯಕ್ಕೂ ಗೇಲಿಗೂ ಆಯಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ಪಟ್ಟಣವನ್ನು ಬೆರಗಿನ ಸಿಳ್ಳಿಗೆ ಗುರಿಮಾಡುವೆನು; ಹಾದುಹೋಗುವವರೆಲ್ಲರೂ ಅದಕ್ಕೆ ಸಂಬಂಧಿಸಿದ ವಿಪತ್ತುಗಳನ್ನು ಕಂಡು ಬೆರಗಾಗಿ ಸಿಳ್ಳುಹಾಕುವರು.
Kannada Bible (KNCL) BSI 2016
ಈ ನಗರವನ್ನು ಭಯಾನಕ ಹಾಗೂ ಹಾಸ್ಯಾಸ್ಪದ ಸ್ಥಳವನ್ನಾಗಿಸುವೆನು. ಹಾದುಹೋಗುವವರೆಲ್ಲರು ಅದಕ್ಕೆ ಒದಗಿದ ವಿಪತ್ತನ್ನು ಕಂಡು ನಿಬ್ಬೆರಗಾಗಿ ಹೀಗಳೆಯುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ಪಟ್ಟಣವನ್ನು ಭಯಾನಕವಾಗಿಯೂ, ಹಾಸ್ಯಾಸ್ಪದವಾಗಿಯೂ ಮಾಡುವೆನು. ಅದರ ಬಳಿಯಲ್ಲಿ ಹಾದುಹೋಗುವವರೆಲ್ಲರು ಅದರ ಎಲ್ಲಾ ಬಾಧೆಗಳ ನಿಮಿತ್ತ ವಿಸ್ಮಯಪಟ್ಟು, ಅಪಹಾಸ್ಯ ಮಾಡುವರು.