Jeremiah 2:33 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಯೆಹೂದವೇ, ಪ್ರಿಯತಮನ ಬೆನ್ನುಹತ್ತಿ ಹೋಗುವದು ನಿನಗೆ ಗೊತ್ತು. ಆದಕಾರಣ ದುರಾಭ್ಯಾಸವನ್ನು ನೀನು ಕಲಿತುಕೊಂಡಿರುವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕಾಮವನ್ನು ತೀರಿಸಿಕೊಳ್ಳಬೇಕೆಂದು ಎಷ್ಟೋ ಮುಂದುವರೆದಿದ್ದಿ! ಇದರಿಂದ ನಿನ್ನ ದುರಭ್ಯಾಸಗಳಿಗೆ ನಿನ್ನ ನಡತೆಯನ್ನು ಹೊಂದಿಸಿಕೊಂಡಿದ್ದಿ.
Kannada BSI Bible 2016
ಪ್ರೀತಿಯನ್ನು ಹುಡುಕುವ ಹಾಗೆ ನಿನ್ನ ಮಾರ್ಗವನ್ನು ಯಾಕೆ ಚಂದ ಮಾಡಿಕೊಳ್ಳುತ್ತೀ? ಕೆಟ್ಟ ಹೆಂಗಸರಿಗೂ ನಿನ್ನ ಮಾರ್ಗವನ್ನು ಕಲಿಸಿದ್ದೀ.
Kannada BSI JV (ಕನ್ನಡ ಸತ್ಯವೇದವು J.V. (BSI))
ಕಾಮವನ್ನು ತೀರಿಸಿಕೊಳ್ಳಬೇಕೆಂದು ಎಷ್ಟೋ ಮುಂದರಿದಿದ್ದೀ! ಆದಕಾರಣ ನಿನ್ನ ದುರಭ್ಯಾಸಗಳಿಗೆ ನಿನ್ನ ನಡತೆಯನ್ನು ಒಗ್ಗಿಸಿಕೊಂಡಿದ್ದೀ.
Kannada Bible (KNCL) BSI 2016
ನೀವು ನಿಮ್ಮ ನಲ್ಲನಲ್ಲೆಯರನ್ನು ಹುಡುಕಿಕೊಂಡು ಹೋಗುವುದರಲ್ಲಿ ಎಷ್ಟೋ ನಿಪುಣರು! ಬಲು ಕೆಟ್ಟ ಹೆಂಗಸು ಕೂಡ ನಿಮ್ಮಿಂದ ಕಲಿತುಕೊಳ್ಳಬಹುದಾಗಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪ್ರಿಯಕರರನ್ನು ಹುಡುಕುವ ಹಾಗೆ ನಿನ್ನ ಮಾರ್ಗವನ್ನು ಏಕೆ ಚಂದ ಮಾಡಿಕೊಳ್ಳುತ್ತೀ? ಇದರಿಂದ ಕೆಟ್ಟ ಹೆಂಗಸರಿಗೂ ನಿನ್ನ ಮಾರ್ಗವನ್ನು ಕಲಿಸಿದ್ದೀ.