Jeremiah 2:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
‘“ಈಜಿಪ್ಟಿನಿಂದ ನಮ್ಮನ್ನು ಕರೆದುಕೊಂಡು ಘಂದ ಯೆಹೋವನು ಎಲ್ಲಿದ್ದಾನೆ? ಮರಳುಗಾಡಿನಿಂದ ನಮ್ಮನ್ನು ಕರೆದುಕೊಂಡು ಘಂದ ಯೆಹೋವನು ಎಲ್ಲಿದ್ದಾನೆ? ನಿರ್ಜನವಾದ ಬೆಟ್ಟಪ್ರದೇಶದಿಂದ ನಮ್ಮನ್ನು ತಂದ ಯೆಹೋವನು ಎಲ್ಲಿದ್ದಾನೆ? ಎಂದು ನಿಮ್ಮ ಪೂರ್ವಿಕರು ಸ್ಮರಿಸಲಿಲ್ಲ. ಯೆಹೋವನು ನಮ್ಮನ್ನು ಅಂಧಕಾರಮಯವಾದ ಮತ್ತು ಅಪಾಯಕಾರಿಯಾದ ಭೂಮಿಯಿಂದ ಕರೆದುತಂದನು. ಆ ಭೂಮಿಯ ಮಾರ್ಗವಾಗಿ ಯಾರೂ ಪ್ರಯಾಣ ಮಾಡುವುದಿಲ್ಲ. ಯಾರೂ ಆ ಭೂಮಿಯ ಮೇಲೆ ವಾಸ ಮಾಡುವದಿಲ್ಲ. ಈಗ ಆ ಯೆಹೋವನು ಎಲ್ಲಿದ್ದಾನೆ?”‘ ನಿಮ್ಮ ಪೂರ್ವಿಕರು ಆ ಪ್ರಶೆಐಗಳನ್ನು ಕೇಳಲೇ ಇಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
‘ನಮ್ಮನ್ನು ಐಗುಪ್ತ ದೇಶದೊಳಗಿಂದ ಬರಮಾಡಿ ಕಾಡಾಗಿಯೂ, ಹಳ್ಳಕೊಳ್ಳವಾಗಿಯೂ, ನಿರ್ಜಲವಾಗಿಯೂ, ಘೋರಾಂಧಕಾರವಾಗಿಯೂ, ಯಾರೂ ಹಾದುಹೋಗದೆಯೂ, ಯಾರೂ ವಾಸಿಸದೆಯೂ ಇರುವ ಅರಣ್ಯದಲ್ಲಿ ನಡೆಸಿದ ಯೆಹೋವನು ಎಲ್ಲಿ?’ ಎಂದು ಅವರು ಅಂದುಕೊಳ್ಳಲಿಲ್ಲವಲ್ಲ.
Kannada BSI Bible 2016
ನಮ್ಮನ್ನು ಐಗುಪ್ತ ದೇಶದೊಳಗಿಂದ ಬರಮಾಡಿ ನಮ್ಮನ್ನು ಅರಣ್ಯದಲ್ಲಿ ಕಾಡೂ ಕುಣಿಗಳೂ ಉಳ್ಳ ದೇಶದಲ್ಲಿ, ಕ್ಷಾಮದ ಮತ್ತು ಮರಣದ ನೆರಳಾದಂಥ ದೇಶದಲ್ಲಿ, ಒಬ್ಬರೂ ಹಾದು ಹೋಗದೆ ಯಾರೂ ವಾಸಮಾಡದೆ ಇರುವಲ್ಲಿ ನಡಿಸಿದ ಕರ್ತನು ಎಲ್ಲಿ ಎಂದು ಅವರು ಅಂದುಕೊಳ್ಳಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಮ್ಮನ್ನು ಐಗುಪ್ತದೇಶದೊಳಗಿಂದ ಬರಮಾಡಿ ಕಾಡಾಗಿಯೂ ಹಳ್ಳಕೊಳ್ಳವಾಗಿಯೂ ನಿರ್ಜಲವಾಗಿಯೂ ಘೋರಾಂಧಕಾರವಾಗಿಯೂ ಯಾರೂ ಹಾದುಹೋಗದೆಯೂ ಯಾರೂ ವಾಸಿಸದೆಯೂ ಇರುವ ಅರಣ್ಯದಲ್ಲಿ ನಡಿಸಿದ ಯೆಹೋವನು ಎಲ್ಲಿ ಎಂದು ಅವರು ಅಂದುಕೊಳ್ಳಲಿಲ್ಲವಲ್ಲ.
Kannada Bible (KNCL) BSI 2016
ಅವರು - ‘ನಮ್ಮನ್ನು ಈಜಿಪ್ಟ್ ದೇಶದಿಂದ ಬರಮಾಡಿ, ಕಾಡುಮೇಡು, ಹಳ್ಳಕೊಳ್ಳ, ಕಗ್ಗತ್ತಲು, ನಿರ್ಜಲ, ನಿರ್ಜನ ಹಾಗೂ ಯಾರೂ ಹಾದುಹೋಗದ ಬೆಂಗಾಡಿನ ಮಾರ್ಗವಾಗಿ ನಡೆಸಿಬಂದ ಆ ಸರ್ವೇಶ್ವರ ಎಲ್ಲಿ?’ ಎಂದುಕೊಳ್ಳಲಿಲ್ಲವೆ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು, ‘ನಮ್ಮನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿ ನಮ್ಮನ್ನು ಮರುಭೂಮಿಯಲ್ಲಿ ಕಾಡು ಕುಳಿಗಳು ಉಳ್ಳ ದೇಶದಲ್ಲಿ, ಕ್ಷಾಮದ ಮತ್ತು ಮರಣದ ನೆರಳಾದಂಥ ದೇಶದಲ್ಲಿ, ಒಬ್ಬರೂ ಹಾದುಹೋಗದೆ ಯಾರೂ ವಾಸಮಾಡದೆ ಇರುವಲ್ಲಿ ನಡೆಸಿದ ಯೆಹೋವ ದೇವರು ಎಲ್ಲಿ?’ ಎಂದು ಪ್ರಶ್ನೆ ಮಾಡಲಿಲ್ಲ.