Jeremiah 21:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಜೆರುಸಲೇಮಿನಲ್ಲಿ ಉಳಿಯುವವನು ಮರಣಹೊಂದುವನು. ಆತನು ಖಡ್ಗದಿಂದಾಗಲಿ ಹಸಿವಿನಿಂದಾಗಲಿ ಭಯಂಕರವಾದ ರೋಗದಿಂದಾಗಲಿ ಮಡಿಯುವನು. ಆದರೆ ಜೆರುಸಲೇಮಿನಿಂದ ಹೊರಗೆ ಬಾಬಿಲೋನಿನ ಸೈನಿಕರಿಗೆ ಶರಣಾಗತನಾದವನು ಬಂದುಕುವನು. ಆ ಸೈನಿಕರು ನಗರವನ್ನು ಮುತ್ತಿದ್ದಾರೆ. ಯಾರೂ ನಗರದಲ್ಲಿ ಆಹಾರವನ್ನು ತರುವಂತಿಲ್ಲ. ಆದರೆ ನಗರವನ್ನು ಬಿಟ್ಟು ಹೊರಗೆ ಹೋದವರು ಬಂದುಕುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪಟ್ಟಣದಲ್ಲಿ ನಿಲ್ಲುವವನು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಸಾಯುವನು. ನಿಮ್ಮನ್ನು ಮುತ್ತುವ ಕಸ್ದೀಯರನ್ನು ಮೊರೆಹೋಗಲು ಪಟ್ಟಣವನ್ನು ಬಿಡುವವನು ಬದುಕುವನು, ತನ್ನ ಪ್ರಾಣವೊಂದನ್ನೇ ಬಾಚಿಕೊಂಡು ಹೋಗುವನು.
Kannada BSI Bible 2016
ಆಗ ಅವರು--ತಮ್ಮ ದೇವರಾದ ಕರ್ತನ ಒಡಂಬಡಿಕೆಯನ್ನು ಬಿಟ್ಟು, ಬೇರೆ ದೇವರುಗಳಿಗೆ ನಮ ಸ್ಕರಿಸಿ ಸೇವಿಸಿದ್ದರಿಂದಲೇ ಎಂದು ಅವರು ಉತ್ತರ ಕೊಡುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಪಟ್ಟಣದಲ್ಲಿ ನಿಲ್ಲುವವನು ಖಡ್ಗಕ್ಷಾಮವ್ಯಾಧಿಗಳಿಂದ ಸಾಯುವನು; ನಿಮ್ಮನ್ನು ಮುತ್ತುವ ಕಸ್ದೀಯರನ್ನು ಮರೆಹೊಗಲು ಪಟ್ಟಣವನ್ನು ಬಿಡುವವನು ಬದುಕುವನು, ತನ್ನ ಪ್ರಾಣವೊಂದನ್ನೇ ಬಾಚಿಕೊಂಡು ಹೋಗುವನು.
Kannada Bible (KNCL) BSI 2016
ನಗರದಲ್ಲೆ ನಿಲ್ಲುವವನು ಖಡ್ಗ - ಕ್ಷಾಮ - ವ್ಯಾಧಿಗಳಿಂದ ಸಾಯುವನು. ನಿಮಗೆ ಮುತ್ತಿಗೆ ಹಾಕುತ್ತಿರುವ ಬಾಬಿಲೋನಿಯಾದವರಿಗೆ ಮರೆಹೋಗಲು ನಗರವನ್ನು ಬಿಡುವವನು ಬದುಕುವನು. ತನ್ನ ಪ್ರಾಣವನ್ನಾದರು ಬಾಚಿಕೊಂಡು ಹೋಗುವನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ಪಟ್ಟಣದಲ್ಲಿ ನಿಲ್ಲುವವನು ಖಡ್ಗದಿಂದಲೂ, ಕ್ಷಾಮದಿಂದಲೂ, ವ್ಯಾಧಿಯಿಂದಲೂ ಸಾಯುವನು. ಆದರೆ ಹೊರಗೆ ಹೋಗಿ, ನಿಮಗೆ ಮುತ್ತಿಗೆ ಹಾಕುವ ಕಸ್ದೀಯರ ಕಡೆಗೆ ಸೇರುವವನು ಬದುಕುವನು. ತನ್ನ ಪ್ರಾಣವೊಂದನ್ನೇ ಬಾಚಿಕೊಂಡು ಹೋಗುವನು.