Jeremiah 23:27 — Compare Translations
5 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೂದದ ಜನರು ನನ್ನ ಹೆಸರನ್ನು ಮರೆಯುವಂತೆ ಅವರು ಪ್ರಯತಐ ಮಾಡುತ್ತಿದ್ದಾರೆ. ಅವರು ಒಬ್ಬರಿಗೊಬ್ಬರು ಈ ಸುಳ್ಳು ಕನಸುಗಳ ಬಗ್ಗೆ ಹೇಳಿ ಹೀಗೆ ಮಾಡುತ್ತಿದ್ದಾರೆ. ಅವರ ಪೂರ್ವಿಕರು ನನ್ನನ್ನು ಮರೆತಂತೆಯೇ ನನ್ನ ಜನರು ಸಹ ನನ್ನನ್ನು ಮರೆಯಲೆಂದು ಪ್ರಯತಐ ಮಾಡುತ್ತಿದ್ದಾರೆ. ಅವರ ಪೂರ್ವಿಕರು ನನ್ನನ್ನು ಮರೆತು ಸುಳ್ಳುದೇವರಾದ ಬಾಳನನ್ನು ಪೂಜಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಂಥಾ ಯೋಚನೆಯು ಸುಳ್ಳಾಗಿ ಪ್ರವಾದಿಸುವ ಈ ಪ್ರವಾದಿಗಳ ಹೃದಯದಲ್ಲಿ ಎಂದಿನವರೆಗೆ ಇರುವುದು?
Kannada BSI JV (ಕನ್ನಡ ಸತ್ಯವೇದವು J.V. (BSI))
ಇಂಥಾ ಯೋಚನೆಯು ಸುಳ್ಳಾಗಿ ಪ್ರವಾದಿಸುವ ಈ ಪ್ರವಾದಿಗಳ ಹೃದಯದಲ್ಲಿ ಎಂದಿನವರೆಗೆ ಇರುವದು? ಕನಸುಕಂಡ ಪ್ರವಾದಿಯು ಕನಸನ್ನು ತಿಳಿಸಿದರೆ ತಿಳಿಸಲಿ;
Kannada Bible (KNCL) BSI 2016
ಇಂಥ ಯೋಚನೆ ಈ ಕಳ್ಳ ಪ್ರವಾದಿಗಳ ಮನದಲ್ಲಿ ಎಲ್ಲಿಯವರೆಗೆ ಇರುವುದು? ಕನಸು ಕಂಡ ಪ್ರವಾದಿ ತನ್ನ ಕನಸನ್ನು ಬೇಕಾದರೆ ತಿಳಿಸಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರ ಪಿತೃಗಳು ಬಾಳನಿಂದ ನನ್ನ ಹೆಸರನ್ನು ಹೇಗೆ ಮರೆತರೋ, ಹಾಗೆಯೇ ಇವರು ತಮ್ಮ ತಮ್ಮ ನೆರೆಯವರಿಗೆ ತಿಳಿಸುವ ಕನಸುಗಳಿಂದ ನನ್ನ ಜನರು ನನ್ನ ಹೆಸರನ್ನು ಮರೆತುಬಿಡುವಂತೆ ಮಾಡುವುದಕ್ಕೆ ಯೋಚಿಸುತ್ತಾರೆ.