Jeremiah 23:33 — Compare Translations
5 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಯೆಹೂದದ ಜನರಾಗಲಿ ಪ್ರವಾದಿಯಾಗಲಿ ಯಾಜಕನಾಗಲಿ ‘ಯೆರೆಮೀಯನೇ, ಯೆಹೋವನು ದಯಪಾಲಿಸಿರುವ ಪ್ರಕಟನೆಯೇನು?’ ಎಂದು ನಿನ್ನನ್ನು ಕೇಳಘಹುದು. ನೀನು ಅವರಿಗೆ, ‘ಯೆಹೋವನಿಗೆ ನೀವೇ ದೊಡ್ಡ ಭಾರ. ನಾನು ಆ ಭಾರವನ್ನು ಕೆಳಗೆ ಎಸೆದುಬಿಡುತ್ತೇನೆ”‘ ಎಂದು ಉತ್ತರಿಸು. ಇದು ಯೆಹೋವನ ನುಡಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪ್ರವಾದಿಯಾಗಲಿ ಅಥವಾ ಯಾಜಕನಾಗಲಿ ಈ ಜನರಲ್ಲಿ ಯಾರೇ ಆಗಲಿ “ಯೆಹೋವನು ದಯಪಾಲಿಸಿರುವ ವಾಕ್ಯದ ಆಧಾರವೇನು?” ಎಂದು ನಿನ್ನನ್ನು ಕೇಳಿದರೆ ನೀನು ಅವರಿಗೆ ಹೀಗೆ ಹೇಳು, “ಯೆಹೋವನು ಇಂತೆನ್ನುತ್ತಾನೆ, ನೀವೇ ನನ್ನ ಹೊರೆ, ನಾನು ನಿಮ್ಮನ್ನು ಎಸೆದುಬಿಡುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಪ್ರವಾದಿಯಾಗಲಿ ಯಾಜಕನಾಗಲಿ ಈ ಜನರಲ್ಲಿ ಯಾರಾಗಲಿ ಯೆಹೋವನು ದಯಪಾಲಿಸಿರುವ ವಾಕ್ಯಭಾರವೇನು ಎಂದು ನಿನ್ನನ್ನು ಕೇಳಿದರೆ ನೀನು ಅವರಿಗೆ ಹೀಗೆ ಹೇಳು - ಯೆಹೋವನು ಇಂತೆನ್ನುತ್ತಾನೆ - ನೀವೇ ನನ್ನ ಭಾರ, ನಾನು ನಿಮ್ಮನ್ನು ಎಸೆದುಬಿಡುವೆನು.
Kannada Bible (KNCL) BSI 2016
“ಪ್ರವಾದಿಯಾಗಲಿ, ಯಾಜಕನಾಗಲಿ, ಈ ಜನರಲ್ಲಿ ಯಾರೇ ಆಗಲಿ, ‘ಸರ್ವೇಶ್ವರ ದಯಪಾಲಿಸಿರುವ ಹೊರೆ ಏನು?’ ಎಂದು ನಿನ್ನನ್ನು ಕೇಳಿದರೆ ನೀನು ಅವರಿಗೆ ಹೀಗೆಂದು ಹೇಳು: ‘ನೀವೇ ಸರ್ವೇಶ್ವರನ ಹೊರೆ. ನಿಮ್ಮನ್ನು ಅವರು ಎಸೆದುಬಿಡುವರು.’
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಪ್ರವಾದಿಯಾಗಲಿ, ಯಾಜಕನಾಗಲಿ, ಈ ಜನರಲ್ಲಿ ಯಾರೇ ಆಗಲಿ, ‘ಯೆಹೋವ ದೇವರು ದಯಪಾಲಿಸಿರುವ ಹೊರೆ ಏನು?’ ಎಂದು ನಿನ್ನನ್ನು ಕೇಳಿದರೆ, ನೀನು ಅವರಿಗೆ ಹೀಗೆಂದು ಹೇಳು: ‘ನೀವೇ, ಯೆಹೋವ ದೇವರ ಹೊರೆ. ನಿಮ್ಮನ್ನು ಆತನು ಎಸೆದುಬಿಡುವನು.’