Jeremiah 23:34 — Compare Translations
5 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಒಬ್ಬ ಪ್ರವಾದಿಯಾಗಲಿ ಯಾಜಕನಾಗಲಿ ಸಾಮಾನ್ಯ ಮನುಷ್ಯನಾಗಲಿ ‘ಇದು ಯೆಹೋವನ ಭಾರ’ ಎಂದು ಹೇಳಿದರೆ ಅವನು ಸುಳ್ಳು ಹೇಳಿದಂತೆಯೇ. ಆದ್ದರಿಂದ ನಾನು ಆ ವ್ಯಕ್ತಿಯನ್ನು ಮತ್ತು ಅವರ ಇಡೀ ಕುಟುಂಘವನ್ನು ದಂಡಿಸುತ್ತೇನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪ್ರವಾದಿ, ಯಾಜಕ, ಸಾಧಾರಣ ಜನ, ಇವರಲ್ಲಿ ಯಾರೂ, ‘ಯೆಹೋವನ ಹೊರೆ’ ಎಂದು ಉಚ್ಚರಿಸುವನೋ ಅವನನ್ನೂ ಅವನ ಮನೆಯವರನ್ನೂ ದಂಡಿಸುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಪ್ರವಾದಿ, ಯಾಜಕ, ಸಾಧಾರಣ ಜನ, ಇವರಲ್ಲಿ ಯಾವನು - ಯೆಹೋವನ ಭಾರ ಎಂದು ಉಚ್ಚರಿಸುವನೋ ಅವನನ್ನೂ ಅವನ ಮನೆಯವರನ್ನೂ ದಂಡಿಸುವೆನು.
Kannada Bible (KNCL) BSI 2016
“ಸರ್ವೇಶ್ವರನ ಹೊರೆ” ಎಂದು ಒಬ್ಬ ಪ್ರವಾದಿಯಾಗಲಿ, ಯಾಜಕನಾಗಲಿ ಅಥವಾ ಒಬ್ಬ ಜನಸಾಮಾನ್ಯನೇ ಆಗಲಿ, ಹೇಳಿದ್ದೇ ಆದರೆ ನಾನು ಅವನನ್ನೂ ಅವನ ಮನೆಯವರನ್ನೂ ದಂಡಿಸುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಒಬ್ಬ ಪ್ರವಾದಿಯಾಗಲಿ, ಯಾಜಕನಾಗಲಿ ಅಥವಾ ಒಬ್ಬ ಜನಸಾಮಾನ್ಯನೇ ಆಗಲಿ, ‘ಯೆಹೋವ ದೇವರು ಹೊರೆ,’ ಎಂದು ಹೇಳಿದ್ದೇಯಾದರೆ, ನಾನು ಅವನನ್ನೂ, ಅವನ ಮನೆಯವರನ್ನೂ ದಂಡಿಸುವೆನು.