Jeremiah 25:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಹೌದು, ಬಾಬಿಲೋನಿನ ಜನರು ಅನೇಕ ಜನಾಂಗಗಳ ಮತ್ತು ಅನೇಕ ಮಹಾರಾಜರ ಸೇವೆ ಮಾಡಙೇಕಾಗುವುದು. ಅವರು ಮಾಡಲಿರುವ ದುಷ್ಕೃತ್ಯಗಳಿಗೆಲ್ಲ ತಕ್ಕ ಶಿಕ್ಷೆಯನ್ನು ನಾನು ಅವರಿಗೆ ಕೊಡುವೆನು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನೇಕ ಜನಾಂಗಗಳೂ ಮತ್ತು ಮಹಾರಾಜರೂ ಅವರನ್ನೇ ಅಡಿಯಾಳಾಗಿ ಮಾಡಿಕೊಳ್ಳುವರು; ಅವರ ಕೃತ್ಯಗಳಿಗೂ ಮತ್ತು ಕೈಕೆಲಸಗಳಿಗೂ ತಕ್ಕಂತೆ ಅವರಿಗೆ ಮುಯ್ಯಿತೀರಿಸುವೆನು” ಎಂಬುದೇ.
Kannada BSI Bible 2016
ನಾನಾದರೋ, ಇಗೋ, ನಿಮ್ಮ ಕೈಯಲ್ಲಿ ಇದ್ದೇನೆ; ನಿಮಗೆ ಒಳ್ಳೇದಾಗಿಯೂ ನ್ಯಾಯವಾಗಿಯೂ ತೋರುವ ಪ್ರಕಾರ ನನಗೆ ಮಾಡಿರಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನೇಕ ಜನಾಂಗಗಳೂ ಮಹಾರಾಜರೂ ಅವರನ್ನೇ ಅಡಿಯಾಳಾಗಿ ಮಾಡಿಕೊಳ್ಳುವರು; ಅವರ ಕೃತ್ಯಗಳಿಗೂ ಕೈಕೆಲಸಗಳಿಗೂ ತಕ್ಕಂತೆ ಅವರಿಗೆ ಮುಯ್ಯಿತೀರಿಸುವೆನು.
Kannada Bible (KNCL) BSI 2016
ಅನೇಕ ರಾಷ್ಟ್ರಗಳೂ ಮಹಾರಾಜರೂ ಅವರನ್ನು ಗುಲಾಮರನ್ನಾಗಿಸಿಕೊಳ್ಳುವರು. ಅವರ ಕೃತ್ಯಗಳಿಗೂ ಕೈಕೆಲಸಗಳಿಗೂ ತಕ್ಕಂತೆ ಅವರಿಗೆ ಮುಯ್ಯಿ ತೀರಿಸುವೆನು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅನೇಕ ಜನಾಂಗಗಳೂ, ದೊಡ್ಡ ಅರಸರೂ ಅವರಿಂದ ಸೇವೆ ಮಾಡಿಸಿಕೊಳ್ಳುವರು. ಅವರ ಕ್ರಿಯೆಗಳ ಪ್ರಕಾರವೂ, ಅವರ ಕೈಕೆಲಸದ ಪ್ರಕಾರವೂ ನಾನು ಅವರಿಗೆ ಪ್ರತಿಫಲ ಕೊಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.