Jeremiah 25:29 — Compare Translations

5 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈಗಾಗಲೆ ನನ್ನ ಹೆಸರುಗೊಂಡಿರುವ ಜೆರುಸಲೇಮ್ ನಗರಕ್ಕೆ ಕೇಡಾಗುವಂತೆ ಮಾಡುತ್ತಿದ್ದೇನೆ. ನಿಮ್ಮನ್ನು ದಂಡನೆಗೆ ಗುರಿ ಮಾಡಲಾಗುವುದಿಲ್ಲವೆಂದು ನೀವು ಯೋಚಿಸುತ್ತಿರಘಹುದು. ಆದರೆ ನಿಮ್ಮ ಯೋಚನೆ ತಪ್ಪು. ನಿಮ್ಮನ್ನು ದಂಡಿಸಲಾಗುವುದು. ಈ ಭೂಮಿಯ ಮೇಲಿನ ಜನರೆಲ್ಲರ ಮೇಲೆ ಆಕ್ರಮಣಮಾಡಲು ನಾನು ಒಂದು ಖಡ್ಗವನ್ನು ಕರೆಯುತ್ತಿದ್ದೇನೆ.”‘ ಇದು ಯೆಹೋವನ ಸಂದೇಶ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಗೋ, ನನ್ನ ಹೆಸರುಗೊಂಡಿರುವ ಪಟ್ಟಣದಲ್ಲಿ ಬಾಧಿಸಲು ಪ್ರಾರಂಭಿಸುತ್ತೇನೆ. ನೀವು ಆ ದಂಡನೆಗೆ ತಪ್ಪಿಸಿಕೊಂಡೀರೋ? ಆಗುವುದೇ ಇಲ್ಲ. ಖಡ್ಗವೇ, ಭೂನಿವಾಸಿಗಳನ್ನೆಲ್ಲ ಸಂಹರಿಸಲಿಕ್ಕೆ ಬಾ” ಎಂದು ಕೂಗುವೆನು. ಇದು ಸೇನಾಧೀಶ್ವರನಾದ ಯೆಹೋವನೆಂಬ ನನ್ನ ನುಡಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಗೋ, ನನ್ನ ಹೆಸರುಗೊಂಡಿರುವ ಪಟ್ಟಣದಲ್ಲಿ ಬಾಧಿಸಲು ಪ್ರಾರಂಭಿಸುತ್ತೇನೆ. ನೀವು ಆ ದಂಡನೆಗೆ ತಪ್ಪಿಸಿಕೊಂಡೀರೋ? ಆಗುವದೇ ಇಲ್ಲ. ಖಡ್ಗವೇ, ಭೂನಿವಾಸಿಗಳನ್ನೆಲ್ಲ ಸಂಹರಿಸಲಿಕ್ಕೆ ಬಾ ಎಂದು ಕೂಗುವೆನು. ಇದು ಸೇನಾಧೀಶ್ವರನಾದ ಯೆಹೋವನೆಂಬ ನನ್ನ ನುಡಿ.
Kannada Bible (KNCL) BSI 2016
ಇಗೋ, ನನ್ನ ಹೆಸರುಗೊಂಡಿರುವ ನಗರದಲ್ಲಿ ಬಾಧಿಸಲು ಪ್ರಾರಂಭಿಸುತ್ತೇನೆ. ನೀವು ಆ ದಂಡನೆಗೆ ತಪ್ಪಿಸಿಕೊಳ್ಳುವಿರೊ? ಆಗುವುದೇ ಇಲ್ಲ. ಏಕೆಂದರೆ ಭೂನಿವಾಸಿಗಳೆಲ್ಲರಿಗೆ ವಿರುದ್ಧವಾಗಿ ಖಡ್ಗವನ್ನು ಬರಮಾಡುವೆನು. ಇದು ಸರ್ವಶಕ್ತ ಸರ್ವೇಶ್ವರನ ನುಡಿ.’
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಕೆಂದರೆ ಇಗೋ, ನನ್ನ ಹೆಸರಿನಿಂದ ಕರೆಯಲಾಗಿರುವ ಪಟ್ಟಣದ ಮೇಲೆ ನಾನು ಕೇಡನ್ನು ತರಿಸುವುದಕ್ಕೆ ಆರಂಭ ಮಾಡುತ್ತೇನೆ. ಹಾಗಾದರೆ ನೀವು ಸಂಪೂರ್ಣ ದಂಡನೆಗೆ ತಪ್ಪಿಸಿಕೊಂಡೀರೋ? ತಪ್ಪಿಸಿಕೊಳ್ಳುವುದಿಲ್ಲ. ಏಕೆಂದರೆ ನಾನು ಭೂನಿವಾಸಿಗಳೆಲ್ಲರ ಮೇಲೆ ಖಡ್ಗವನ್ನು ಕರೆಯುತ್ತೇನೆಂದು ಸೇನಾಧೀಶ್ವರ ಯೆಹೋವ ದೇವರು ನುಡಿಯುತ್ತಾರೆ.’