Jeremiah 25:34 — Compare Translations

5 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಕುರುಬರೇ, ನೀವು ಕುರಿಗಳಿಗೆ (ಜನಗಳಿಗೆ) ಮುಂದಾಳಾಗಿ ನಡೆಯಬೇಕು. ಮಹಾನಾಯಕರೇ, ನೀವು ಗೋಳಾಡಲು ಪ್ರಾರಂಭಿಸಿರಿ. ಕುರಿಗಳ ಮುಂದಾಳುಗಳಾದ ನೀವು ನೋವಿನಿಂದ ನೆಲದ ಮೇಲೆ ಹೊರಳಾಡಿರಿ. ಏಕೆಂದರೆ ಈಗ ನಿಮ್ಮನ್ನು ವಊಸುವ ಕಾಲ ಘಂದಿದೆ. ನಾನು ನಿಮ್ಮ ಕುರಿಗಳನ್ನು ದಿಕ್ಕಾಪಾಲು ಮಾಡಿಬಿಡುತ್ತೇನೆ. ಅವುಗಳು ಒಡೆದ ಪಾತ್ರೆಯ ಚೂರುಗಳಂತೆ ಚೆಲ್ಲಾಪಿಲ್ಲಿಯಾಗುತ್ತವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕುರುಬರೇ, ಅರಚಿ ಗೋಳಾಡಿರಿ! ಮಂದೆಯಲ್ಲಿನ ಹಿರಿಯ ನಾಯಕರೇ, ಬೂದಿಯಲ್ಲಿ ಬಿದ್ದು ಹೊರಳಾಡಿರಿ! ನಿಮ್ಮನ್ನು ವಧಿಸುವ ಕಾಲವು ಬಂದಿದೆ; ನಾನು ನಿಮ್ಮನ್ನು ಭಂಗಪಡಿಸುವೆನು; ನೀವು ಬಿದ್ದು ಒಡೆದುಹೋದ ಅಂದವಾದ ಪಾತ್ರೆಯಂತೆ ಚೂರುಚೂರಾಗುವಿರಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಕುರುಬರೇ, ಅರಚಿ ಗೋಳಾಡಿರಿ! ಮಂದೆಯಲ್ಲಿನ ಹಿರಿಯ ಮಣಿಗಳೇ, [ಬೂದಿಯಲ್ಲಿ] ಬಿದ್ದು ಹೊರಳಾಡಿರಿ! ನಿಮ್ಮನ್ನು ವಧಿಸುವ ಕಾಲವು ತುಂಬಿದೆ; ನಾನು ನಿಮ್ಮನ್ನು ಭಂಗಪಡಿಸುವೆನು; ನೀವು ಬಿದ್ದುಹೋದ ಅಂದವಾದ ಪಾತ್ರೆಯಂತೆ ಚೂರುಚೂರಾಗುವಿರಿ.
Kannada Bible (KNCL) BSI 2016
‘ಕುರಿಗಾಹಿಗಳೇ, ಅರಚಿಗೋಳಾಡಿ ಮೇಷಪಾಲರೇ, ಬೂದಿಯಲ್ಲಿ ಬಿದ್ದು ಹೊರಳಾಡಿ. ನಿಮ್ಮನ್ನು ವಧಿಸುವ ಕಾಲ ಬಂದಿದೆ ನಾನು ನಿಮ್ಮನ್ನು ಭಂಗಪಡಿಸುವೆ. ನೀವು ಚೂರುಚೂರಾಗುವಿರಿ ಒಡೆದುಹೋದ ಅಂದವಾದ ಪಾತ್ರೆಯಂತೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಕುರುಬರೇ, ಗೋಳಿಟ್ಟು ಕೂಗಿರಿ. ಮಂದೆಯಲ್ಲಿನ ಪ್ರಮುಖರೇ, ಧೂಳಿನಲ್ಲಿ ಹೊರಳಾಡಿರಿ. ಏಕೆಂದರೆ ನಿಮ್ಮನ್ನು ಕೊಲ್ಲುವುದಕ್ಕೂ, ಚದರಿಸುವುದಕ್ಕೂ ದಿನಗಳು ತುಂಬಿ ಇವೆ. ಆಗ ನೀವು ಒಡೆದುಹೋದ ಅಂದವಾದ ಪಾತ್ರೆಯಂತೆ ಬೀಳುವಿರಿ.