Jeremiah 25:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬೇರೆ ದೇವರುಗಳನ್ನು ಅನುಸರಿಸಙೇಡಿರಿ; ಅವುಗಳ ಸೇವೆ ಮಾಡಙೇಡಿರಿ; ಅವುಗಳನ್ನು ಪೂಜಿಸಙೇಡಿರಿ. ಮನುಷ್ಯ ನಿರ್ಮಿತವಾದ ವಿಗ್ರಹಗಳನ್ನು ಪೂಜಿಸಙೇಡಿ. ನೀವು ಪೂಜಿಸಿದರೆ ನಿಮ್ಮ ಮೇಲೆ ನಾನು ಕೋಪಗೊಂಡು ನಿಮಗೆ ಕೇಡುಮಾಡುವೆನು” ಎಂದು ಹೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನ್ಯದೇವತೆಗಳನ್ನು ಹಿಂಬಾಲಿಸಿ, ಸೇವಿಸಿ ಪೂಜಿಸಬೇಡಿರಿ; ನಿಮ್ಮ ಕೈಕೆಲಸದ ಬೊಂಬೆಗಳಿಂದ ನನ್ನನ್ನು ರೇಗಿಸಬೇಡಿರಿ; ಹೀಗಾದರೆ ನಾನು ನಿಮಗೆ ಯಾವ ಕೇಡನ್ನೂ ಮಾಡುವುದಿಲ್ಲ’ ಎಂಬುದೇ.
Kannada BSI Bible 2016
ಆಗ ನಾನು ಈ ಮನೆಯನ್ನು ಶಿಲೋವಿನ ಹಾಗೆ ಮಾಡುತ್ತೇನೆ; ಈ ಪಟ್ಟಣವನ್ನು ಭೂಮಿಯ ಎಲ್ಲಾ ಜನಾಂಗಗಳಿಗೆ ಶಾಪಕ್ಕೆ ಗುರಿಯಾಗುವಂತೆ ಮಾಡುತ್ತೇನೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನ್ಯದೇವತೆಗಳನ್ನು ಹಿಂಬಾಲಿಸಿ ಸೇವಿಸಿ ಪೂಜಿಸಬೇಡಿರಿ; ನಿಮ್ಮ ಕೈಕೆಲಸದ ಬೊಂಬೆಗಳಿಂದ ನನ್ನನ್ನು ರೇಗಿಸದಿರಿ; ಹೀಗಾದರೆ ನಾನು ನಿಮಗೆ ಯಾವ ಕೇಡನ್ನೂ ಮಾಡೆನು ಎಂಬದೇ.
Kannada Bible (KNCL) BSI 2016
ಬೇರೆ ದೇವರುಗಳನ್ನು ಹಿಂಬಾಲಿಸಿ, ಅವರನ್ನು ಸೇವಿಸಿ ಪೂಜಿಸಬೇಡಿ. ನಿಮ್ಮ ಕೈ ಕೃತಿಗಳಾದ ವಿಗ್ರಹಗಳನ್ನು ಆರಾಧಿಸಿ, ನನ್ನನ್ನು ರೇಗಿಸಬೇಡಿ. ಆಗ ನಾನು ನಿಮಗೆ ಯಾವ ಕೇಡನ್ನೂ ಮಾಡೆನು.’
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬೇರೆ ದೇವರುಗಳನ್ನು ಸೇವಿಸುವುದಕ್ಕೂ, ಆರಾಧಿಸುವುದಕ್ಕೂ ಹಿಂಬಾಲಿಸಬೇಡಿರಿ. ನಿಮ್ಮ ಕೈಕೆಲಸಗಳಿಂದ ನನಗೆ ಕೋಪವನ್ನು ಎಬ್ಬಿಸಬೇಡಿರಿ. ಆಗ ನಿಮಗೆ ಯಾವ ಕೇಡೂ ಮಾಡೆನು.”