Jeremiah 26:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಮೊದಲು ಯೆಹೋವನ ಸಂದೇಶವನ್ನು ಪ್ರವಾದಿಸುವ ಇನೊಐಬ್ಬ ಮನುಷ್ಯನಿದ್ದನು. ಅವನ ಹೆಸರು ಊರೀಯ. ಅವನು ಶಮಾಯನ ಮಗ. ಊರೀಯನು ಕಿರ್ಯತ್‌ಯಾರೀಮ್ ಎಂಬ ಊರಿನವನು. ಈ ನಗರದ ಬಗ್ಗೆ ಮತ್ತು ಪ್ರದೇಶದ ಬಗ್ಗೆ ಯೆರೆಮೀಯನು ಪ್ರವಾದಿಸಿದ್ದನ್ನೆ ಊರೀಯನು ಪ್ರವಾದಿಸಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದೇ ಸಮಯದಲ್ಲಿ ಶಮಾಯನ ಮಗನೂ ಕಿರ್ಯತ್ ಯಾರೀಮ್ ಊರಿನವನೂ ಆದ ಊರೀಯನೆಂಬ ಒಬ್ಬ ಮನುಷ್ಯನು ಯೆಹೋವನ ಹೆಸರಿನಲ್ಲಿ ಪ್ರವಾದಿಸುವವನಾಗಿದ್ದು ಯೆರೆಮೀಯನು ನುಡಿದಂತೆಯೇ ಈ ಪಟ್ಟಣಕ್ಕೂ ಈ ದೇಶಕ್ಕೂ ಅಹಿತವನ್ನು ನುಡಿಯುತ್ತಿದ್ದನು.
Kannada BSI Bible 2016
ತಕ್ಕೊಂಡು ಹೋಗದಂಥ ಸ್ಥಂಭಗಳನ್ನು ಕುರಿತು ಸಮುದ್ರವನ್ನು ಕುರಿತು ಗದ್ದಿಗೆ ಗಳನ್ನು ಕುರಿತು ಈ ಪಟ್ಟಣದಲ್ಲಿ ಉಳಿದ ಬೇರೆ ಪಾತ್ರೆ ಗಳನ್ನು ಕುರಿತು ಸೈನ್ಯಗಳ ಕರ್ತನು ಹೇಳುವದೇನಂದರೆ--
Kannada BSI JV (ಕನ್ನಡ ಸತ್ಯವೇದವು J.V. (BSI))
ಮತ್ತು ಶಮಾಯನ ಮಗನೂ ಕಿರ್ಯತ್‍ಯಾರೀಮ್ ಊರಿನವನೂ ಆದ ಊರೀಯನೆಂಬವನೊಬ್ಬನು ಯೆಹೋವನ ಹೆಸರಿನಲ್ಲಿ ಪ್ರವಾದಿಸುವವನಾಗಿದ್ದು ಯೆರೆಮೀಯನು ನುಡಿದಂತೆಯೇ ಈ ಪಟ್ಟಣಕ್ಕೂ ಈ ದೇಶಕ್ಕೂ ಅಹಿತವನ್ನು ನುಡಿಯುತ್ತಿದ್ದನು.
Kannada Bible (KNCL) BSI 2016
ಸರ್ವೇಶ್ವರನ ಹೆಸರಿನಲ್ಲಿ ಪ್ರವಾದನೆ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿ ಇದ್ದ. ಅವನು ಕಿರ್ಯತ್‍ಯಾರೀಮ್ ಊರಿಗೆ ಸೇರಿದ ಶಮಾಯನ ಮಗ ಊರೀಯ ಎಂಬುವನು. ಯೆರೆಮೀಯನು ನುಡಿದಂತೆಯೇ ಈ ನಗರಕ್ಕೂ ಈ ನಾಡಿಗೂ ಅಹಿತವಾದುದನ್ನೆ ನುಡಿಯುತ್ತಿದ್ದ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಕಿರ್ಯತ್ ಯಾರೀಮಿನವನಾದ ಶೆಮಾಯನ ಮಗ ಊರೀಯ ಎಂಬುವವನು ಸಹ ಯೆಹೋವ ದೇವರ ಹೆಸರಿನಲ್ಲಿ ಪ್ರವಾದಿಸುತ್ತಿರಲಾಗಿ ಯೆರೆಮೀಯನ ಎಲ್ಲಾ ಮಾತುಗಳ ಪ್ರಕಾರ, ಈ ಪಟ್ಟಣಕ್ಕೂ, ಈ ದೇಶಕ್ಕೂ ವಿರೋಧವಾಗಿ ಪ್ರವಾದಿಸಿದನು.