Jeremiah 26:21 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ರಾಜನಾದ ಯೆಹೋಯಾಕೀಮನೂ ಅವನ ಸೇನೆಯ ಅಊಕಾರಿಗಳೂ ಯೆಹೂದದ ನಾಯಕರೂ ಊರೀಯನ ಪ್ರವಾದನೆಯನ್ನು ಕೇಳಿದರು. ಅವರಿಗೆ ಕೋಪಘಂದಿತು. ರಾಜನಾದ ಯೆಹೋಯಾಕೀಮನು ಊರೀಯನನ್ನು ಕೊಲ್ಲಬಯಸಿದನು. ಆದರೆ ಯೆಹೋಯಾಕೀಮನು ತನ್ನನ್ನು ಕೊಲ್ಲಬಯಸುತ್ತಾನೆಂದು ಊರೀಯನು ಕೇಳಿದನು. ಊರೀಯನು ಭಯಪಟ್ಟು ತಪ್ಪಿಸಿಕೊಂಡು ಈಜಿಪ್ಟ್ ದೇಶಕ್ಕೆ ಹೋದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅರಸನಾದ ಯೆಹೋಯಾಕೀಮನೂ, ಅವನ ಎಲ್ಲಾ ಪ್ರಸಿದ್ಧ ಶೂರರೂ ಮತ್ತು ಸರದಾರರೂ ಇವನ ಮಾತುಗಳನ್ನು ಕೇಳಿದಾಗ ಅರಸನು ಇವನನ್ನು ಕೊಂದುಹಾಕಲು ಮನಸ್ಸು ಮಾಡಿದನು; ಆದರೆ ಊರೀಯನು ಆ ಸುದ್ದಿಯನ್ನು ಕೇಳಿ ಭಯಪಟ್ಟು ಓಡಿಹೋಗಿ ಐಗುಪ್ತವನ್ನು ಸೇರಿಕೊಂಡನು.
Kannada BSI Bible 2016
ಕರ್ತನ ಆಲಯದಲ್ಲಿಯೂ ಯೆಹೂದದ ಮತ್ತು ಯೆರೂಸಲೇಮಿನ ಅರಸನ ಮನೆಯಲ್ಲಿಯೂ ಉಳಿದಿರುವ ಪಾತ್ರೆಗಳ ವಿಷಯವಾಗಿ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ಅವು ಬಾಬೆಲಿಗೆ ತರಲ್ಪಡುವವು; ನಾನು ಅವು ಗಳನ್ನು ವಿಚಾರಿಸುವ ದಿನದ ವರೆಗೆ ಅಲ್ಲಿಯೇ ಇರು ವವು. ಆಗ ನಾನು ಅವುಗಳನ್ನು ಗಮನಕ್ಕೆ ತಂದು ಈ ಸ್ಥಳಕ್ಕೆ ತಿರುಗಿ ತರುವೆನು ಎಂದು ಕರ್ತನು ಅನ್ನುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅರಸನಾದ ಯೆಹೋಯಾಕೀಮನೂ ಅವನ ಎಲ್ಲಾ ಪ್ರಸಿದ್ಧ ಶೂರರೂ ಸರದಾರರೂ ಇವನ ಮಾತುಗಳನ್ನು ಕೇಳಿದಾಗ ಅರಸನು ಇವನನ್ನು ಕೊಂದುಹಾಕಲು ಮನಮಾಡಿದನು; ಆದರೆ ಊರೀಯನು ಆ ಸುದ್ದಿಯನ್ನು ಕೇಳಿ ಭಯಪಟ್ಟು ಓಡಿಹೋಗಿ ಐಗುಪ್ತವನ್ನು ಸೇರಿಕೊಂಡನು.
Kannada Bible (KNCL) BSI 2016
ಅರಸ ಯೆಹೋಯಾಕೀಮನು ಮತ್ತು ಅವನ ಎಲ್ಲ ವೀರಶೂರರು ಹಾಗು ನಾಯಕರು ಆ ಊರೀಯನ ಮಾತುಗಳನ್ನು ಕೇಳಿಸಿಕೊಂಡರು. ಕೂಡಲೆ ಅರಸ ಅವನನ್ನು ಕೊಂದುಹಾಕಲು ಮನಸ್ಸುಮಾಡಿದ. ಈ ಸುದ್ದಿಯನ್ನು ಕೇಳಿದ ಊರೀಯ ಭಯಪಟ್ಟು ಓಡಿಹೋಗಿ ಈಜಿಪ್ಟನ್ನು ಸೇರಿಕೊಂಡ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅರಸನಾದ ಯೆಹೋಯಾಕೀಮನೂ, ಅವನ ಪರಾಕ್ರಮಶಾಲಿಗಳೆಲ್ಲರೂ, ಪ್ರಧಾನರೆಲ್ಲರೂ ಅವನ ಮಾತುಗಳನ್ನೆಲ್ಲಾ ಕೇಳಿದಾಗ, ಅರಸನು ಅವನನ್ನು ಕೊಂದುಹಾಕಬೇಕೆಂದಿದ್ದನು. ಆದರೆ ಊರೀಯನು ಅದನ್ನು ಕೇಳಿ ಭಯಪಟ್ಟು ಓಡಿಹೋಗಿ, ಈಜಿಪ್ಟಿಗೆ ಸೇರಿಕೊಂಡನು.