Jeremiah 28:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆರೆಮೀಯನು ಹನನ್ಯನಿಗೆ, “ಹಾಗೆಯೇ ಆಗಲಿ, ನೀನು ಹೇಳಿದಂತೆ ಯೆಹೋವನು ಮಾಡಲಿ. ನೀನು ಪ್ರವಾದಿಸಿದ ಸಂದೇಶವನ್ನು ಯೆಹೋವನು ನಿಜವಾಗುವಂತೆ ಮಾಡುವನೆಂದು ನಾನು ಆಶಿಸುತ್ತೇನೆ. ಯೆಹೋವನು ಬಾಬಿಲೋನಿನಿಂದ ತನ್ನ ಆಲಯದ ವಸ್ತುಗಳನ್ನು ಇಲ್ಲಿಗೆ ತರುವನೆಂದು ನಾನು ಆಶಿಸುವೆ. ತಮ್ಮ ಮನೆಗಳನ್ನು ಬಿಟ್ಟುಹೋಗಲು ಒತ್ತಾಯಿಸಲ್ಪಟ್ಟ ಜನರನ್ನು ಮತ್ತೆ ಯೆಹೋವನು ಇಲ್ಲಿಗೆ ಕರೆತರುವನೆಂದು ನಾನು ಆಶಿಸುವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಹಾಗೆಯೇ ಆಗಲಿ, ಯೆಹೋವನು ಹಾಗೆಯೇ ಮಾಡಲಿ! ಯೆಹೋವನು ತನ್ನ ಆಲಯದ ಉಪಕರಣಗಳನ್ನೂ ಸೆರೆಹೋದವರೆಲ್ಲರನ್ನೂ ಬಾಬೆಲಿನಿಂದ ಈ ಸ್ಥಳಕ್ಕೆ ಪುನಃ ಬರಮಾಡಿ ನೀನು ನುಡಿದ ಮಾತುಗಳನ್ನು ನೆರವೇರಿಸಲಿ!
Kannada BSI Bible 2016
ನಿಮ್ಮ ಕುಮಾರರಿಗೆ ಹೆಂಡತಿಯರನ್ನು ತಕ್ಕೊಳ್ಳಿರಿ; ನಿಮ್ಮ ಕುಮಾರ್ತೆಯರನ್ನು ಪುರಷರಿಗೆ ಕೊಡಿರಿ, ಅವರು ಕುಮಾರ ಕುಮಾರ್ತೆಯರನ್ನು ಹೆರಲಿ; ಹೀಗೆ ನೀವು ಕಡಿಮೆಯಾಗದೆ ಅಲ್ಲಿ ಹೆಚ್ಚಿರಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಹಾಗಾಗಲಿ, ಯೆಹೋವನು ಹಾಗೇ ಮಾಡಲಿ! ಯೆಹೋವನು ತನ್ನ ಆಲಯದ ಉಪಕರಣಗಳನ್ನೂ ಸೆರೆಹೋದವರೆಲ್ಲರನ್ನೂ ಬಾಬೆಲಿನಿಂದ ಈ ಸ್ಥಳಕ್ಕೆ ಪುನಃ ಬರಮಾಡಿ ನೀನು ನುಡಿದ ಮಾತುಗಳನ್ನು ನೆರವೇರಿಸಲಿ!
Kannada Bible (KNCL) BSI 2016
“ಆಮೆನ್! ಸರ್ವೇಶ್ವರ ಹಾಗೆಯೇ ಮಾಡಲಿ! ಸರ್ವೇಶ್ವರ ತಮ್ಮ ಆಲಯದ ಉಪಕರಣಗಳನ್ನೂ ಸೆರೆಹೋದವರೆಲ್ಲರನ್ನೂ ಬಾಬಿಲೋನಿನಿಂದ ಈ ಸ್ಥಳಕ್ಕೆ ಪುನಃ ಬರಮಾಡಲಿ. ನೀನು ನುಡಿದ ಮಾತುಗಳನ್ನು ನೆರವೇರಿಸಲಿ!
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಆಮೆನ್, ಯೆಹೋವ ದೇವರು ಹಾಗೆಯೇ ಮಾಡಲಿ; ನೀನು ಪ್ರವಾದಿಸಿದೆ; ನಿನ್ನ ವಾಕ್ಯಗಳನ್ನು ಯೆಹೋವ ದೇವರು ನೆರವೇರಿಸಿ, ಯೆಹೋವ ದೇವರ ಆಲಯದ ಪಾತ್ರೆಗಳನ್ನೂ, ಸೆರೆಯವರೆಲ್ಲರನ್ನೂ ಬಾಬಿಲೋನಿನಿಂದ ತಿರುಗಿ ಈ ಸ್ಥಳಕ್ಕೆ ಬರಮಾಡಲಿ.