Jeremiah 29:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು ನಿಮಗೆ ದೊರೆಯುವೆನು. ಇದು ಯೆಹೋವನ ನುಡಿ. “ನಾನು ನಿಮ್ಮನ್ನು ನಿಮ್ಮ ಘಂಧನದಿಂದ ಬಿಡಿಸಿ ಕರೆದುತರುವೆನು. ನಾನು ಈ ಸ್ಥಳವನ್ನು ಬಿಡಲು ನಿಮಗೆ ಒತ್ತಾಯಿಸಿದೆ. ಆದರೆ ನಾನು ನಿಮ್ಮನ್ನು ಕಳುಹಿಸಿದ್ದ ಎಲ್ಲಾ ಜನಾಂಗಗಳಿಂದ ಮತ್ತು ಎಲ್ಲಾ ಸ್ಥಳಗಳಿಂದ ನಿಮ್ಮನ್ನು ಒಟ್ಟುಗೂಡಿಸಿ ಈ ಸ್ಥಳಕ್ಕೆ ಕರೆದು ತರುವೆನು.” ಇದು ಯೆಹೋವನ ನುಡಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ನಿಮಗೆ ದೊರೆಯುವೆನು, ನಿಮ್ಮನ್ನು ನಿಮ್ಮ ದುರವಸ್ಥೆಯಿಂದ ತಪ್ಪಿಸಿ, ನಾನು ನಿಮ್ಮನ್ನು ಅಟ್ಟಿಬಿಟ್ಟಿದ್ದ ಸಮಸ್ತ ದೇಶಗಳಿಂದಲೂ, ಸಕಲಜನಾಂಗಗಳ ಮಧ್ಯದಿಂದಲೂ ಒಟ್ಟುಗೂಡಿಸಿ ನಿಮ್ಮನ್ನು ಯಾವ ಸ್ಥಳದಿಂದ ಸೆರೆಗೆ ಸಾಗಿಸಿದೆನೋ ಅಲ್ಲಿಗೆ ತಿರುಗಿ ಬರಮಾಡುವೆನು, ಇದು ಯೆಹೋವನ ನುಡಿ” ಎಂಬುದೇ.
Kannada BSI Bible 2016
ನಿನ್ನನ್ನು ಪ್ರೀತಿ ಮಾಡುವವರೆಲ್ಲರು ನಿನ್ನನ್ನು ಮರೆತುಬಿಟ್ಟಿದ್ದಾರೆ, ನಿನ್ನನ್ನು ಹುಡುಕುವದಿಲ್ಲ; ನಿನ್ನ ಅಕ್ರಮಗಳು ಬಹಳವೂ ನಿನ್ನ ಪಾಪಗಳು ಪ್ರಬಲವೂ ಆಗಿರುವದರಿಂದ ಶತ್ರುವಿನ ಗಾಯದಿಂದಲೂ ಕ್ರೂರನ ಶಿಕ್ಷೆಯಿಂದಲೂ ನಾನು ನಿನ್ನನ್ನು ಗಾಯಪಡಿಸಿದ್ದೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ನಿಮಗೆ ದೊರೆಯುವೆನು, ನಿಮ್ಮನ್ನು ನಿಮ್ಮ ದುರವಸ್ಥೆಯಿಂದ ತಪ್ಪಿಸಿ ನಾನು ನಿಮ್ಮನ್ನು ಅಟ್ಟಿಬಿಟ್ಟಿದ್ದ ಸಮಸ್ತದೇಶಗಳಿಂದಲೂ ಸಕಲಜನಾಂಗಗಳ ಮಧ್ಯದಿಂದಲೂ ಒಟ್ಟುಗೂಡಿಸಿ ನಿಮ್ಮನ್ನು ಯಾವ ಸ್ಥಳದಿಂದ ಸೆರೆಗೆ ಸಾಗಿಸಿದನೋ ಅಲ್ಲಿಗೆ ತಿರಿಗಿ ಬರಮಾಡುವೆನು. ಇದು ಯೆಹೋವನ ನುಡಿ.
Kannada Bible (KNCL) BSI 2016
ಹೌದು, ನಾನು ನಿಮಗೆ ದೊರೆಯುವೆನು. ನಿಮ್ಮನ್ನು ನಿಮ್ಮ ದುರವಸ್ಥೆಯಿಂದ ತಪ್ಪಿಸಿ, ನಿಮ್ಮನ್ನು ಅಟ್ಟಲಾಗಿದ್ದ ಸಮಸ್ತ ದೇಶಗಳಿಂದಲೂ ಸಕಲ ರಾಷ್ಟ್ರಗಳ ಮಧ್ಯೆಯಿಂದಲೂ ಒಟ್ಟುಗೂಡಿಸಿ, ನಿಮ್ಮನ್ನು ಯಾವ ಸ್ಥಳದಿಂದ ಸೆರೆಗೆ ಸಾಗಿಸಿದೆನೋ ಅಲ್ಲಿಗೆ ಮರಳಿ ಬರಮಾಡುವೆನು. ಇದು ಸರ್ವೇಶ್ವರನಾದ ನನ್ನ ನುಡಿ.’
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಮಗೆ ದೊರೆಯುವೆನು. ನಿಮ್ಮ ಸೆರೆಯನ್ನು ತಿರುಗಿಸಿ ನಾನು ನಿಮ್ಮನ್ನು ಓಡಿಸಿಬಿಟ್ಟ ಎಲ್ಲಾ ಜನಾಂಗಗಳಿಂದಲೂ, ಎಲ್ಲಾ ಸ್ಥಳಗಳಿಂದಲೂ ನಿಮ್ಮನ್ನು ಕೂಡಿಸುವೆನು. ನಾನು ಯಾವ ಸ್ಥಳದಿಂದ ನಿಮ್ಮನ್ನು ಸೆರೆಯಾಗಿ ಕಳುಹಿಸಿದೆನೋ, ಆ ಸ್ಥಳಕ್ಕೆ ನಿಮ್ಮನ್ನು ತಿರುಗಿ ಬರಮಾಡುವೆನು.”