Jeremiah 29:22 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೂದದ ಬಂಧಿಗಳೆಲ್ಲಾ ಬೇರೆಯವರಿಗೆ ಕೇಡಾಗಲಿ ಎಂದು ಕೇಳಿಕೊಳ್ಳುವಾಗ ಆ ಜನರ ಉದಾಹರಣೆ ಕೊಡುವರು. ಆ ಬಂಧಿಗಳು ಹೀಗೆನ್ನುವರು: ‘ಬಾಬಿಲೋನಿನ ರಾಜನು ಬೆಂಕಿಯಲ್ಲಿ ಸುಟ್ಟುಬಿಟ್ಟ ಚಿದ್ಕೀಯನ ಮತ್ತು ಅಹಾಘನ ಗತಿಯನ್ನು ಯೆಹೋವನು ನಿನಗೆ ತರಲಿ.’
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವರ ಚರಿತ್ರೆಯನ್ನು ಬಾಬೆಲಿನಲ್ಲಿ ಸೆರೆಯಾಗಿರುವ ಯೆಹೂದ್ಯರೆಲ್ಲರು ಶಪಿಸುವ ಮಾತಾಗಿ ತೆಗೆದುಕೊಂಡು ‘ಬಾಬೆಲಿನ ಅರಸನು ಬೆಂಕಿಯಲ್ಲಿ ಸುಟ್ಟುಬಿಟ್ಟ ಚಿದ್ಕೀಯನ ಮತ್ತು ಅಹಾಬನ ಗತಿಯನ್ನು ಯೆಹೋವನು ನಿನಗೆ ತರಲಿ’ ಎಂದು ಶಪಿಸುವರು.
Kannada BSI Bible 2016
ನೀವು ನನಗೆ ಜನರಾಗಿರುವಿರಿ; ನಾನು ನಿಮಗೆ ದೇವರಾಗಿರುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವರ ಚರಿತ್ರೆಯನ್ನು ಬಾಬೆಲಿನಲ್ಲಿ ಸೆರೆಯಾಗಿರುವ ಯೆಹೂದ್ಯರೆಲ್ಲರು ಶಪಿಸುವ ಮಾತಾಗಿ ತೆಗೆದುಕೊಂಡು ಬಾಬೆಲಿನ ಅರಸನು ಬೆಂಕಿಯಲ್ಲಿ ಸುಟ್ಟುಬಿಟ್ಟ ಚಿದ್ಕೀಯನ ಮತ್ತು ಅಹಾಬನ ಗತಿಯನ್ನು ಯೆಹೋವನು ನಿನಗೆ ತರಲಿ ಎಂದು ಶಪಿಸುವರು;
Kannada Bible (KNCL) BSI 2016
ಇವರಿಗೆ ಒದಗಿದ ಗತಿಯನ್ನು ನೆನೆದು, ಬಾಬಿಲೋನಿಯದಲ್ಲಿ ಸೆರೆಯಾಗಿರುವ ಯೆಹೂದ್ಯರೆಲ್ಲರು ಯಾರನ್ನಾದರು ಶಪಿಸುವಾಗ, ‘ಬಾಬಿಲೋನಿಯದ ಅರಸ ಬೆಂಕಿಯಲ್ಲಿ ಸುಟ್ಟು ಭಸ್ಮಮಾಡಿದ ಚಿದ್ಕೀಯನ ಹಾಗು ಅಹಾಬನ ಗತಿಯನ್ನೆ ಸರ್ವೇಶ್ವರ ನಿನಗೂ ತರಲಿ’ ಎಂದು ಶಾಪಹಾಕುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬಾಬಿಲೋನಿನಲ್ಲಿರುವ ಯೆಹೂದದ ಸೆರೆಯವರೆಲ್ಲರು ಅವರಿಂದ ಶಾಪವನ್ನು ತೆಗೆದುಕೊಂಡು, ‘ಬಾಬಿಲೋನಿನ ಅರಸನು ಬೆಂಕಿಯಲ್ಲಿ ಸುಟ್ಟುಬಿಟ್ಟ ಚಿದ್ಕೀಯನ ಹಾಗೆಯೂ, ಅಹಾಬನ ಹಾಗೆಯೂ ಯೆಹೋವ ದೇವರು ನಿನಗೆ ಮಾಡಲಿ,’ ಎಂದು ಹೇಳುವರು.