Jeremiah 29:23 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ಪ್ರವಾದಿಗಳಿಬ್ಬರು ಇಸ್ರೇಲಿನಲ್ಲಿ ಹೆಚ್ಚಿನ ದುರಾಚಾರವನ್ನು ನಡೆಸಿದರು. ಅವರು ತಮ್ಮ ನೆರೆಯವರ ಹೆಂಡತಿಯರೊಂದಿಗೆ ವ್ಯಭಿಚಾರ ಮಾಡಿದರು. ಅವರು ಸುಳ್ಳುಗಳನ್ನು ಹೇಳಿದರು. ಆ ಸುಳ್ಳುಗಳನ್ನು ಯೆಹೋವನಾದ ನನ್ನ ಸಂದೇಶವೆಂದು ಹೇಳಿದರು. ಹಾಗೆ ಮಾಡಲು ನಾನು ಅವರಿಗೆ ಹೇಳಿಲ್ಲ, ಅವರು ಏನು ಮಾಡಿದ್ದಾರೆಂಬುದನ್ನು ನಾನು ಘಲ್ಲೆ. ಅದಕ್ಕೆ ನಾನೇ ಸಾಕ್ಷಿ.” ಇದು ಯೆಹೋವನ ಸಂದೇಶ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವರು ಇಸ್ರಾಯೇಲಿನಲ್ಲಿ ದುರಾಚಾರವನ್ನು ನಡೆಸಿ, ನೆರೆಯವರ ಹೆಂಡತಿಯರೊಂದಿಗೆ ವ್ಯಭಿಚಾರಮಾಡಿ, ನಾನು ಆಜ್ಞಾಪಿಸದ ಮಾತುಗಳನ್ನು ನನ್ನ ಹೆಸರಿನ ಮೇಲೆ ಸುಳ್ಳಾಗಿ ಸಾರಿದಿರಲ್ಲಾ; ನಾನೇ ಬಲ್ಲೆ, ನಾನೇ ಸಾಕ್ಷಿ ಎಂದು ಯೆಹೋವನು ಅನ್ನುತ್ತಾನೆ” ಎಂಬುದೇ.
Kannada BSI Bible 2016
ಇಗೋ, ಕರ್ತನ ಬಿರುಗಾಳಿ ರೌದ್ರವಾಗಿ ಹೊರ ಡುತ್ತದೆ. ಅದು ಬಡಕೊಂಡು ಹೋಗುವ ಬಿರುಗಾಳಿ ಯೇ; ಬಾಧೆಯು ದುಷ್ಟರ ತಲೆಯ ಮೇಲೆ ಬೀಳುವದು.ಕರ್ತನ ಕೋಪದ ಉರಿಯು ಅದನ್ನು ಮಾಡುವ ವರೆಗೂ ತನ್ನ ಹೃದಯದ ಆಲೋಚನೆಗಳನ್ನು ನಡಿಸಿ ರುವ ವರೆಗೂ ತಿರುಗುವದಿಲ್ಲ; ನೀವು ಅಂತ್ಯದಿನದಲ್ಲಿ ಅದನ್ನು ಯೋಚಿಸುವಿರಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವರು ಇಸ್ರಾಯೇಲಿನಲ್ಲಿ ದುರಾಚಾರವನ್ನು ನಡಿಸಿ ನೆರೆಯವರ ಹೆಂಡಿರಲ್ಲಿ ವ್ಯಭಿಚಾರಮಾಡಿ ನಾನು ಆಜ್ಞಾಪಿಸಿದ ಮಾತುಗಳನ್ನು ನನ್ನ ಹೆಸರಿನ ಮೇಲೆ ಸುಳ್ಳಾಗಿ ಸಾರಿದರಲ್ಲಾ; ನಾನೇ ಬಲ್ಲೆ, ನಾನೇ ಸಾಕ್ಷಿ ಎಂದು ಯೆಹೋವನು ಅನ್ನುತ್ತಾನೆ ಎಂಬದೇ.
Kannada Bible (KNCL) BSI 2016
ಏಕೆಂದರೆ ಇವರು ಇಸ್ರಯೇಲಿನಲ್ಲಿ ದುರಾಚಾರವನ್ನು ನಡೆಸಿದರು. ನೆರೆಯವರ ಹೆಂಡಿರಲ್ಲಿ ವ್ಯಭಿಚಾರಮಾಡಿದರು. ನಾನು ಆಜ್ಞಾಪಿಸಿದ ಮಾತುಗಳನ್ನು ನನ್ನ ಹೆಸರೆತ್ತಿಯೇ ಸುಳ್ಳಾಗಿ ಸಾರಿದರು. ಇದೆಲ್ಲ ನನಗೆ ಗೊತ್ತಿದೆ, ಇದಕ್ಕೆಲ್ಲಾ ನಾನೇ ಸಾಕ್ಷಿ’ ಎನ್ನುತ್ತಾರೆ ಸರ್ವೇಶ್ವರ.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಕೆಂದರೆ ಅವರು ತಮ್ಮ ನೆರೆಯವರ ಹೆಂಡರ ಸಂಗಡ ವ್ಯಭಿಚಾರ ಮಾಡಿ, ನನ್ನ ಹೆಸರಿನಲ್ಲಿ ಸುಳ್ಳಾಗಿ ನಾನು ಅವರಿಗೆ ಆಜ್ಞಾಪಿಸದೆ ಇದ್ದ ಮಾತುಗಳನ್ನಾಡಿ, ಇಸ್ರಾಯೇಲಿನಲ್ಲಿ ನೀಚತನವನ್ನು ನಡೆಸಿದರು. ನಾನೇ ಅದನ್ನು ತಿಳಿದು ಸಾಕ್ಷಿಯಾಗಿದ್ದೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.