Jeremiah 29:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇಸ್ರೇಲರ ದೇವರೂ, ಸರ್ವಶಕ್ತನೂ ಆಗಿರುವ ಯೆಹೋವನು, ಹೀಗೆನ್ನುತ್ತಾನೆ: “ನಿಮ್ಮ ಪ್ರವಾದಿಗಳು ಮತ್ತು ಮಾಟಮಂತ್ರಗಾರರು ನಿಮ್ಮನ್ನು ಮರುಳುಗೊಳಿಸದಿರಲಿ. ಅವರು ನೋಡುವ ಕನಸುಗಳಿಗೆ ಕಿವಿಗೊಡಙೇಡಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನಿಮ್ಮ ಮಧ್ಯದಲ್ಲಿರುವ ನಿಮ್ಮ ಪ್ರವಾದಿಗಳಿಂದಲೂ, ಶಕುನದವರಿಂದಲೂ ಮೋಸಹೋಗಬೇಡಿರಿ; ನಿಮಗಾಗಿ ಕನಸುಕಂಡು ಹೇಳುವವರಿಗೆ ಕಿವಿಗೊಡಬೇಡಿರಿ.
Kannada BSI Bible 2016
ಆ ದಿವಸದಲ್ಲಿ ಆಗುವದೇನಂದರೆ--ನಾನು ಅವನ ನೊಗವನ್ನು ನಿನ್ನ ಕುತ್ತಿಗೆಯ ಮೇಲಿನಿಂದ ಮುರಿದು ಹಾಕುವೆನು; ನಿನ್ನ ಬಂಧನಗಳನ್ನು ಹರಿದುಬಿಡುವೆನು; ಅನ್ಯರು ಇನ್ನು ಅವನಿಂದ ಸೇವೆ ಮಾಡಿಸಿಕೊಳ್ಳುವದಿಲ್ಲವೆಂದು ಸೈನ್ಯ ಗಳ ಕರ್ತನು ಅನ್ನುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲ್ಯರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ - ನಿಮ್ಮ ಮಧ್ಯದಲ್ಲಿರುವ ನಿಮ್ಮ ಪ್ರವಾದಿಗಳಿಂದಲೂ ಶಕುನದವರಿಂದಲೂ ಮೋಸಹೋಗಬೇಡಿರಿ; ನಿಮಗಾಗಿ ಕನಸುಕಂಡು ಹೇಳುವವರಿಗೆ ಕಿವಿಗೊಡದಿರಿ;
Kannada Bible (KNCL) BSI 2016
ಇಸ್ರಯೇಲರ ದೇವರೂ ಸೇನಾಧೀಶ್ವರ ಸರ್ವೇಶ್ವರನೂ ಆದ ನಾನು ನಿಮಗೆ ಹೇಳುತ್ತೇನೆ: ನಿಮ್ಮ ಮಧ್ಯೆ ಇರುವ ಪ್ರವಾದಿಗಳಿಗೂ ಶಕುನದವರಿಗೂ ಕಿವಿಗೊಟ್ಟು ಮೋಸಹೋಗದಿರಿ. ನಿಮಗಾಗಿ ಕನಸುಕಂಡು ಹೇಳುವವರನ್ನು ನಂಬಬೇಡಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಿಮ್ಮ ಮಧ್ಯದಲ್ಲಿರುವ ನಿಮ್ಮ ಪ್ರವಾದಿಗಳೂ ನಿಮ್ಮ ಶಕುನದವರೂ ನಿಮಗೆ ಮೋಸಮಾಡದಿರಲಿ. ನೀವು ಕೇಳುವ ನಿಮ್ಮ ಕನಸುಗಳಿಗೆ ಕಿವಿಗೊಡಬೇಡಿರಿ.