Jeremiah 3:18 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ಕಾಲದಲ್ಲಿ ಯೆಹೂದದ ಜನರು ಇಸ್ರೇಲ್ ಜನರನ್ನು ಕೂಡಿಕೊಳ್ಳುವರು. ಅವೆರಡೂ ಕೂಡಿ ಉತ್ತರದಿಕ್ಕಿನ ಪ್ರದೇಶದಿಂದ ಬರುವರು. ನಾನು ಅವರ ಪೂರ್ವಿಕರಿಗೆ ಕೊಟ್ಟ ಪ್ರದೇಶಕ್ಕೆ ಅವರು ಬರುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಕಾಲದಲ್ಲಿ ಯೆಹೂದ ವಂಶವು ಇಸ್ರಾಯೇಲ್ ವಂಶದೊಡನೆ ಜೊತೆಯಾಗಿ ನಡೆಯುವುದು. ಎರಡೂ ಸೇರಿ ನಾನು ನಿಮ್ಮ ಪೂರ್ವಿಕರಿಗೆ ಬಾಧ್ಯವಾಗಿ ದಯಪಾಲಿಸಿದ ದೇಶಕ್ಕೆ ಉತ್ತರ ಸೀಮೆಯನ್ನು ಬಿಟ್ಟು ಬರುವವು.
Kannada BSI Bible 2016
ಆ ದಿನಗಳಲ್ಲಿ ಯೆಹೂದದ ಮನೆ ತನವು ಇಸ್ರಾಯೇಲಿನ ಮನೆಯ ಸಂಗಡ ಹೋಗು ವದು; ಅವರು ಏಕವಾಗಿ ಉತ್ತರ ದೇಶದಿಂದ ನಾನು ನಿಮ್ಮ ತಂದೆಗಳಿಗೆ ಸ್ವಾಸ್ತ್ಯವಾಗಿ ಕೊಟ್ಟ ದೇಶಕ್ಕೆ ಬರುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಕಾಲದಲ್ಲಿ ಯೆಹೂದವಂಶವು ಇಸ್ರಾಯೇಲ್ ವಂಶದೊಡನೆ ಜೊತೆಯಾಗಿ ನಡೆಯುವದು, ಎರಡೂ ಕಲೆತು ನಾನು ನಿಮ್ಮ ಪಿತೃಗಳಿಗೆ ಬಾಧ್ಯವಾಗಿ ದಯಪಾಲಿಸಿದ ದೇಶಕ್ಕೆ ಬಡಗಣ ಸೀಮೆಯೊಳಗಿಂದ ಬರುವವು.
Kannada Bible (KNCL) BSI 2016
ಆ ಕಾಲದಲ್ಲಿ ಜುದೇಯ ವಂಶವು ಇಸ್ರಯೇಲ್ ವಂಶದೊಡನೆ ಜೊತೆಯಾಗಿ ಬಾಳುವುದು. ಈ ಎರಡು ವಂಶಗಳೂ ಉತ್ತರ ಪ್ರಾಂತ್ಯವನ್ನು ಬಿಟ್ಟು ನಾನು ನಿಮ್ಮ ಪೂರ್ವಜರಿಗೆ ಬಾಧ್ಯವಾಗಿ ಕೊಟ್ಟ ನಾಡಿಗೆ ಬರುವುವು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ಕಾಲದಲ್ಲಿ ಯೆಹೂದದ ವಂಶವು ಇಸ್ರಾಯೇಲ್ ವಂಶದೊಡನೆ ಜೊತೆಯಾಗಿ ಬಾಳುವುದು. ಈ ಎರಡು ವಂಶಗಳೂ ಉತ್ತರ ಪ್ರಾಂತಗಳನ್ನು ಬಿಟ್ಟು, ನಾನು ನಿಮ್ಮ ಪೂರ್ವಜರಿಗೆ ಬಾಧ್ಯವಾಗಿ ಕೊಟ್ಟ ನಾಡಿಗೆ ಬರುವುವು.”