Jeremiah 30:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿಮ್ಮನ್ನು ನೋಡಿಕೊಳ್ಳಲು ಯಾರೂ ಇಲ್ಲ. ಆದ್ದರಿಂದ ನಿಮ್ಮ ಗಾಯಗಳು ವಾಸಿಯಾಗುವದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿನ್ನ ಪಾಲಿಗೆ ಯಾರೂ ಇಲ್ಲ, ನಿನ್ನ ಹುಣ್ಣಿಗೆ ಔಷಧವಿಲ್ಲ, ನಿನಗೆ ವಾಸಿಯಾಗುವುದಿಲ್ಲ.
Kannada BSI Bible 2016
ಆಗ ಕನ್ಯಾಸ್ತ್ರೀಯೂ ಪ್ರಾಯದವರೂ ಮುದುಕರ ಸಹಿತವಾಗಿ ನಾಟ್ಯದಲ್ಲಿ ಸಂತೋಷಪಡುವರು, ಯಾಕಂ ದರೆ ಅವರ ದುಃಖವನ್ನು ಆನಂದಕ್ಕೆ ಬದಲಾಯಿಸು ವೆನು; ಅವರನ್ನು ಆದರಿಸಿ ದುಃಖದಿಂದ ಬಿಡಿಸಿ ಅವ ರಿಗೆ ಸಂತೋಷವನ್ನುಂಟು ಮಾಡುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿನ್ನ ಭಾಗಕ್ಕೆ ಯಾರೂ ಇಲ್ಲ, ನಿನ್ನ ವ್ರಣಕ್ಕೆ ಔಷಧವಿಲ್ಲ, ನಿನಗೆ ವಾಸಿಯಾಗದು.
Kannada Bible (KNCL) BSI 2016
ನಿನ್ನ ಪರ ವಾದಿಸುವವರಿಲ್ಲ, ನಿನ್ನ ವ್ರಣಕ್ಕೆ ಔಷಧವಿಲ್ಲ ನಿನ್ನನ್ನು ಆರೈಕೆ ಮಾಡುವವರಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿನಗೋಸ್ಕರ ವಾದಿಸುವವರು ಯಾರೂ ಇರುವುದಿಲ್ಲ. ನಿನ್ನ ಗಾಯವನ್ನು ನಿನಗೆ ಕಟ್ಟುವ ಹಾಗೆ ವಾಸಿಮಾಡುವ ಔಷಧಗಳು ನಿನಗೆ ಇಲ್ಲ.