Jeremiah 30:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇಸ್ರೇಲೇ, ಯೆಹೂದವೇ, ನೀವು ನಿಮ್ಮ ಗಾಯಗಳಿಗಾಗಿ ಏಕೆ ಅರಚುವಿರಿ? ನಿಮ್ಮ ಗಾಯಗಳು ಆಳವಾಗಿವೆ ಮತ್ತು ಅದಕ್ಕೆ ಔಷಊಯಿಲ್ಲ. ಯೆಹೋವನಾದ ನಾನು ನಿಮ್ಮ ಮಹಾಪರಾಧಕ್ಕಾಗಿ ಹೀಗೆಲ್ಲ ಮಾಡಿದೆ. ನಾನು ನಿಮ್ಮ ಅನೇಕ ಪಾಪಗಳಿಗಾಗಿ ಹೀಗೆಲ್ಲ ಮಾಡಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಯ್ಯೋ, ನೋವು ನಿಲ್ಲದು ಎಂದು ನಿನ್ನ ಪೆಟ್ಟಿಗಾಗಿ ಏಕೆ ಅರಚಿಕೊಳ್ಳುತ್ತೀ? ನಿನ್ನ ಅಪರಾಧವು ಹೆಚ್ಚಿ ಪಾಪಗಳು ಬಹಳವಾದುದರಿಂದ ನಿನಗೆ ಇದನ್ನೆಲ್ಲಾ ಮಾಡಿದೆನು.
Kannada BSI Bible 2016
ಕರ್ತನು ಹೀಗೆ ಹೇಳುತ್ತಾನೆ; ರಾಮದಲ್ಲಿ ಸ್ವರವೂ ಗೋಳಾಟವೂ ಅಘೋರವಾದ ಅಳುವಿಕೆಯೂ ಕೇಳಲ್ಪ ಟ್ಟಿತು; ರಾಹೇಲಳು ತನ್ನ ಮಕ್ಕಳಿಲ್ಲದ್ದರಿಂದ ಆದರಣೆ ಹೊಂದಲೊಲ್ಲದೆ ಅಳುತ್ತಾಳೆ;
Kannada BSI JV (ಕನ್ನಡ ಸತ್ಯವೇದವು J.V. (BSI))
ಅಯ್ಯೋ, ನೋವು ನಿಲ್ಲದು ಎಂದು ನಿನ್ನ ವ್ರಣಕ್ಕಾಗಿ ಏಕೆ ಅರಚಿಕೊಳ್ಳುತ್ತೀ? ನಿನ್ನ ಅಪರಾಧವು ಹೆಚ್ಚಿ ಪಾಪಗಳು ಬಹಳವಾದದರಿಂದ ನಿನಗೆ ಇದನ್ನೆಲ್ಲಾ ಮಾಡಿದೆನು.
Kannada Bible (KNCL) BSI 2016
‘ಅಯ್ಯೋ ನೋವು ನಿಲ್ಲದಿದೆ,’ ಎಂದು ನಿನ್ನ ಗಾಯಕ್ಕಾಗಿ ಗೋಳಿಡುತ್ತಿರುವೆ ಏಕೆ? ನಿನ್ನ ಅಪರಾಧ ಹೆಚ್ಚಿದೆ, ಪಾಪಗಳು ಬಹಳವಿವೆ ಎಂದೇ ಇದನ್ನೆಲ್ಲ ನಿನಗೆ ಮಾಡಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿನ್ನ ಗಾಯದ ನೋವಿನ ನಿಮಿತ್ತ ಏಕೆ ಕೂಗುತ್ತೀ? ನಿನ್ನ ದುಃಖವು ಗುಣವಾಗದಂಥಾದ್ದೇ. ನಿನ್ನ ಅಕ್ರಮ ಬಹಳವಾಗಿರುವುದರಿಂದಲೂ, ನಿನ್ನ ಪಾಪಗಳು ಪ್ರಬಲವಾಗಿರುವುದರಿಂದಲೂ ಇವುಗಳನ್ನು ನಿನಗೆ ಮಾಡಿದ್ದೇನೆ.