Jeremiah 30:23 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಯೆಹೋವನು ಘಹಳ ಕೋಪ ತಾಳಿದ್ದನು. ಅವನು ಜನರನ್ನು ಶಿಕ್ಷಿಸಿದನು. ಆ ಶಿಕ್ಷೆಯು ಒಂದು ಬಿರುಗಾಳಿಯಂತೆ ಘಂದಿತು. ಆ ಶಿಕ್ಷೆಯು ದುಷ್ಟಜನರ ಮೇಲೆ ತೂಫಾನಿನಂತೆ ಘಂದಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಹಾ, ಯೆಹೋವನ ರೋಷವೆಂಬ ಬಿರುಗಾಳಿಯು, ಬಡಿದುಕೊಂಡು ಹೋಗುವ ಗಾಳಿಯು ಹೊರಟಿದೆ; ಅದು ದುಷ್ಟರ ತಲೆಯ ಮೇಲೆ ಹೊಡೆಯುವುದು.
Kannada BSI Bible 2016
ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ; ಯೆಹೂದ ದೇಶದಲ್ಲಿಯೂ ಅದರ ಪಟ್ಟಣಗಳಲ್ಲಿಯೂ ನಾನು ಅವರನ್ನು ಸೆರೆಯಿಂದ ತಿರುಗಿ ತರುವಾಗ ನೀತಿಯ ನಿವಾಸವೇ, ಪರಿಶುದ್ಧ ಪರ್ವತವೇ, ಕರ್ತನು ನಿನ್ನನ್ನು ಆಶೀರ್ವದಿಸಲಿ ಎಂದು ಇನ್ನೂ ಹೇಳುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಹಾ, ಯೆಹೋವನ ರೋಷವೆಂಬ ಬಿರುಗಾಳಿಯು, ಬಡಿದುಕೊಂಡು ಹೋಗುವ ಗಾಳಿಯು, ಹೊರಟಿದೆ; ಅದು ದುಷ್ಟರ ತಲೆಯ ಮೇಲೆ ಹೊಡೆಯುವದು.
Kannada Bible (KNCL) BSI 2016
ಇಗೋ, ಹೊರಟಿದೆ ಬಡಿದುಕೊಂಡು ಹೋಗುವ ಗಾಳಿ ಸರ್ವೇಶ್ವರನ ರೋಷವೆಂಬ ಬಿರುಗಾಳಿ ದುರುಳರ ತಲೆಯ ಮೇಲೆ ಬಡಿದೋಡುವ ಸುಂಟರ ಗಾಳಿ!
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಗೋ, ಯೆಹೋವ ದೇವರ ಬಿರುಗಾಳಿ ರೌದ್ರವಾಗಿ ಹೊರಡುತ್ತದೆ. ಅದು ಬಡಿದುಕೊಂಡು ಹೋಗುವ ಬಿರುಗಾಳಿಯೇ. ಬಾಧೆಯು ದುಷ್ಟರ ತಲೆಯ ಮೇಲೆ ಬೀಳುವುದು.