Jeremiah 31:18 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಎಫ್ರಾಯೀಮ್ ಅಳುವುದನ್ನು ನಾನು ಕೇಳಿದ್ದೇನೆ. ಎಫ್ರಾಯೀಮು ಹೀಗೆ ಹೇಳುವದನ್ನು ನಾನು ಕೇಳಿದ್ದೇನೆ. ‘ಯೆಹೋವನೇ, ನೀನು ನಿಜವಾಗಿ ನನ್ನನ್ನು ದಂಡಿಸಿದೆ. ನಾನು ಪಾಠವನ್ನು ಕಲಿತೆನು. ನಾನು ತರಙೇತಿ ಹೊಂದದ ಒಂದು ಹೋರಿಯುಂತಿದ್ದೆನು. ನನ್ನನ್ನು ದಂಡಿಸುವದನ್ನು ದಯವಿಟ್ಟು ನಿಲ್ಲಿಸು. ನಾನು ನಿನ್ನಲ್ಲಿಗೆ ಹಿಂದಿರುಗಿ ಬರುತ್ತೇನೆ. ನಿಜವಾಗಿಯೂ ನೀನೇ ನನ್ನ ದೇವರಾದ ಯೆಹೋವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಎಫ್ರಾಯೀಮು ಹೀಗೆ ಪ್ರಲಾಪಿಸಿಕೊಳ್ಳುವುದನ್ನು ಕೇಳಿದ್ದೇನೆ, ‘ನೀನು ನನ್ನನ್ನು ಶಿಕ್ಷಿಸಿದ್ದಿ, ಪಳಗದ ಹೋರಿಯಂತೆ ಶಿಕ್ಷೆಯನ್ನು ಅನುಭವಿಸಿದೆನು. ನನ್ನನ್ನು ತಿರುಗಿಸು, ನೀನು ತಿರುಗಿಸಿದ ಹಾಗೆ ತಿರುಗುವೆನು; ನೀನು ನನ್ನ ದೇವರಾದ ಯೆಹೋವನಲ್ಲವೆ.
Kannada BSI Bible 2016
ನೀನು ಸಾವಿರಾರು ತಲೆಗಳ ವರೆಗೆ ಪ್ರೀತಿ, ದಯೆ ತೋರಿಸಿ ತಂದೆಗಳ ಅಕ್ರಮವನ್ನು ಅವರ ತರುವಾಯ ಇರುವ ಅವರ ಮಕ್ಕಳ ಎದೆಯಲ್ಲಿ ಸಲ್ಲಿಸುವವನಾಗಿದ್ದೀ; ಮಹತ್ವ ವುಳ್ಳವನೂ ಪರಾಕ್ರಮವುಳ್ಳ ದೇವರೂ ಸೈನ್ಯಗಳ ಕರ್ತನೂ ಎಂಬದು ಆತನ ಹೆಸರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಎಫ್ರಾಯೀಮು ಹೀಗೆ ಪ್ರಲಾಪಿಸಿಕೊಳ್ಳುವದನ್ನು ಕೇಳೇ ಕೇಳಿದ್ದೇನೆ - ನೀನು ನನ್ನನ್ನು ಶಿಕ್ಷಿಸಿದ್ದೀ, ಪಳಗದ ಹೋರಿಯಂತೆ ಶಿಕ್ಷೆಯನ್ನು ಅನುಭವಿಸಿದೆನು; ನನ್ನನ್ನು ತಿರುಗಿಸು, ನೀನು ತಿರುಗಿಸಿದ ಹಾಗೆ ತಿರುಗುವೆನು; ನೀನು ನನ್ನ ದೇವರಾದ ಯೆಹೋವನಲ್ಲವೆ.
Kannada Bible (KNCL) BSI 2016
ಎಫ್ರಯಿಮಿನ ಈ ಪ್ರಲಾಪ ನನ್ನ ಕಿವಿಗೆ ಬಿದ್ದಿದೆ: ‘ನೀನು ನನಗೆ ಶಿಕ್ಷೆ ವಿಧಿಸಿದೆ ಪಳಗದ ಹೋರಿಯಂತೆ ನಾನು ಆ ಶಿಕ್ಷೆಯನ್ನು ಅನುಭವಿಸಿದೆ. ನೀನು ನನ್ನನ್ನು ತಿರುಗಿಸು, ನೀ ತಿರುಗಿಸಿದ ಹಾಗೆ ನಾನು ತಿರುಗುವೆ. ನೀನೆ ನನ್ನ ದೇವರಾದ ಸರ್ವೇಶ್ವರನಲ್ಲವೆ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಎಫ್ರಾಯೀಮನು ಅಂಗಲಾಚುವುದನ್ನು ನಿಶ್ಚಯವಾಗಿ ಕೇಳಿದೆನು. ಹೇಗೆಂದರೆ, ‘ನೀನು ನನ್ನನ್ನು ಶಿಕ್ಷಿಸಿದೆ. ಪಳಗದ ಹೋರಿಗೆ ಆದ ಹಾಗೆ ನನಗೆ ಶಿಕ್ಷೆ ಆಯಿತು. ನನ್ನನ್ನು ತಿರುಗಿಸು, ಆಗ ತಿರುಗಿಕೊಳ್ಳುವೆನು. ಯೆಹೋವ ದೇವರೇ, ನೀವೇ ನನ್ನ ದೇವರಾಗಿದ್ದೀರಿ.