Jeremiah 31:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನೇ, ನಾನು ನಿನಗೆ ದೂರವಾಗಿ ಅಲೆದಾಡಿದೆನು. ಆದರೆ ನಾನು ಮಾಡಿದ ದುಷ್ಕೃತ್ಯಗಳ ಬಗ್ಗೆ ತಿಳಿದುಕೊಂಡೆನು. ಆದ್ದರಿಂದ ನಾನು ನನ್ನ ಮನಸ್ಸನ್ನೂ ಜೀವನವನ್ನೂ ಪರಿವರ್ತಿಸಿಕೊಂಡೆ. ತಾರುಣ್ಯಾವಸ್ಥೆಯಲ್ಲಿ ನಾನು ಮಾಡಿದ ಮೂರ್ಖತನಕ್ಕಾಗಿ ಲಜ್ಜೆಗೊಂಡೆನು; ನಾಚಿಕೆಪಟ್ಟೆನು.”‘
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತಿರುಗಿಸಲ್ಪಟ್ಟ ಮೇಲೆಯೇ ಪಶ್ಚಾತ್ತಾಪ ಪಟ್ಟೆನು; ತಿಳಿವಳಿಕೆಯನ್ನು ಹೊಂದಿದ ಮೇಲೆಯೇ ತೊಡೆಯನ್ನು ಬಡಿದುಕೊಂಡೆನು. ನನ್ನ ಯೌವನದ ಅವಮಾನವನ್ನು ನನ್ನ ಮೇಲೆ ಹೊತ್ತುಕೊಂಡ ಕಾರಣ ಲಜ್ಜೆಗೊಂಡೆನು, ಹೌದು, ತುಂಬಾ ನಾಚಿಕೆಪಟ್ಟೆನು.’”
Kannada BSI Bible 2016
ಆಲೋಚನೆ ಯಲ್ಲಿ ದೊಡ್ಡವನು ಕ್ರಿಯೆಯಲ್ಲಿ ಬಲಿಷ್ಠನು; ನಿನ್ನ ಕಣ್ಣುಗಳು ಮನುಷ್ಯರ ಮಕ್ಕಳ ಎಲ್ಲಾ ಮಾರ್ಗಗಳ ಮೇಲೆ ಒಬ್ಬೊಬ್ಬನಿಗೆ ಅವನವನ ಮಾರ್ಗದ ಪ್ರಕಾರ ವಾಗಿಯೂ ಅವನವನ ಕ್ರಿಯೆಗಳ ಫಲದ ಪ್ರಕಾರ ವಾಗಿಯೂ ಕೊಡುವ ಹಾಗೆ ತೆರೆದವೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ತಿರುಗಿಸಲ್ಪಟ್ಟ ಮೇಲೆಯೇ ಪಶ್ಚಾತ್ತಾಪಪಟ್ಟೆನು; ತಿಳುವಳಿಕೆಯನ್ನು ಹೊಂದಿದ ಮೇಲೆಯೇ ತೊಡೆಯನ್ನು ಬಡಿದುಕೊಂಡೆನು; ನನ್ನ ಯೌವನದ ಅವಮಾನವು ನನ್ನ ಮೇಲೆ ಹೊತ್ತ ಕಾರಣ ಲಜ್ಜೆಗೊಂಡೆನು, ಹೌದು, ತುಂಬಾ ನಾಚಿಕೆಪಟ್ಟೆನು.
Kannada Bible (KNCL) BSI 2016
ತಿರುಗಿಸಲ್ಪಟ್ಟ ಮೇಲೆಯೆ ನಾನು ಪಶ್ಚಾತ್ತಾಪ ಪಟ್ಟೆ ತಿಳುವಳಿಕೆ ಹೊಂದಿದ ಮೇಲೆಯೆ ಕೆನ್ನೆಗೆ ಹಾಕಿಕೊಂಡೆ ನನ್ನ ಯೌವನ ನಡತೆ ನನಗೆ ಅವಮಾನದ ಹೊರೆ ಈ ಕಾರಣ ಲಜ್ಜೆಗೊಂಡೆ. ಹೌದು, ನಾಚಿಕೆಯಿಂದ ತಲೆತಗ್ಗಿಸಿದೆ’.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ನಿಮ್ಮಿಂದ ದೂರವಾದ ಮೇಲೆಯೇ ಪಶ್ಚಾತ್ತಾಪ ಪಟ್ಟೆನು; ತಿಳುವಳಿಕೆ ಹೊಂದಿದ ಮೇಲೆಯೇ ದುಃಖದಿಂದ ನನ್ನ ಎದೆಯನ್ನು ಬಡಿದುಕೊಂಡೆನು. ನನ್ನ ಯೌವನದ ಅವಮಾನವನ್ನು ನನ್ನ ಮೇಲೆ ಹೊತ್ತುಕೊಂಡ ಕಾರಣ ನಾನು ಲಜ್ಜೆಗೊಂಡೆನು, ಹೌದು, ತುಂಬಾ ನಾಚಿಕೆಪಟ್ಟೆನು.’