Jeremiah 31:23 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇಸ್ರೇಲಿನ ದೇವರೂ ಸರ್ವಶಕ್ತನಾದ ಯೆಹೋವನೂ ಹೀಗೆನ್ನುತ್ತಾನೆ: “ನಾನು ಯೆಹೂದದ ಜನರಿಗಾಗಿ ಮತ್ತೆ ಒಳ್ಳೆಯದನ್ನು ಮಾಡುವೆನು. ಸೆರೆಯಾಳುಗಳಾಗಿ ಒಯ್ಯಲ್ಪಟ್ಟಿದ್ದವರನ್ನು ನಾನು ಮತ್ತೆ ಕರೆದುತರುವೆನು. ಆಗ ಅವರು ಯೆಹೂದನಾಡಿನಲ್ಲಿಯೂ ಅದರ ನಗರಗಳಲ್ಲಿಯೂ ಹೀಗೆನ್ನುವರು: ‘ನ್ಯಾಯವಾದ ನಿವಾಸವೇ, ಪವಿತ್ರ ಪರ್ವತವೇ, ಯೆಹೋವನು ನಿನ್ನನ್ನು ಆಶೀರ್ವದಿಸಲಿ.’
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, “ನಾನು ನನ್ನ ಜನರ ದುರವಸ್ಥೆಯನ್ನು ತಪ್ಪಿಸುವಾಗ ಯೆಹೂದ ದೇಶದಲ್ಲಿಯೂ ಅದರ ಪಟ್ಟಣಗಳಲ್ಲಿಯೂ, ‘ನ್ಯಾಯದ ನಿವಾಸವೇ, ಪರಿಶುದ್ಧ ಪರ್ವತವೇ, ಯೆಹೋವನು ನಿನ್ನನ್ನು ಆಶೀರ್ವದಿಸಲಿ’ ಎಂದು ಮತ್ತೆ ಮಾತನಾಡುವರು.
Kannada BSI Bible 2016
ಅವರು ಅದರಲ್ಲಿ ಸೇರಿ ಅದನ್ನು ಸ್ವಾಧೀನಪಡಿಸಿಕೊಂಡರು; ಆದರೆ ಅವರು ನಿನ್ನ ಸ್ವರಕ್ಕೆ ಕಿವಿಗೊಡಲಿಲ್ಲ; ನಿನ್ನ ನ್ಯಾಯಪ್ರಮಾಣದಲ್ಲಿ ನಡಕೊಳ್ಳ ಲಿಲ್ಲ; ಮಾಡಬೇಕೆಂದು ನೀನು ಅವರಿಗೆ ಆಜ್ಞಾಪಿಸಿ ದ್ದನ್ನೆಲ್ಲಾ ಮಾಡಲಿಲ್ಲ. ಆದದರಿಂದ ಈ ಕೇಡನ್ನೆಲ್ಲಾ ಅವರಿಗೆ ಸಂಭವಿಸುವಂತೆ ಮಾಡಿದ್ದೀ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ - ನಾನು ನನ್ನ ಜನರ ದುರವಸ್ಥೆಯನ್ನು ತಪ್ಪಿಸುವಾಗ ಯೆಹೂದ ದೇಶದಲ್ಲಿಯೂ ಅವರ ಪಟ್ಟಣಗಳಲ್ಲಿಯೂ - ನ್ಯಾಯದ ನಿವಾಸವೇ, ಪರಿಶುದ್ಧ ಪರ್ವತವೇ, ಯೆಹೋವನು ನಿನ್ನನ್ನು ಆಶೀರ್ವದಿಸಲಿ ಎಂದು ಮತ್ತೆ ಮಾತಾಡುವರು.
Kannada Bible (KNCL) BSI 2016
ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರನ ನುಡಿ ಹೀಗಿದೆ: “ನಾನು ನನ್ನ ಜನರ ಗುಲಾಮಗಿರಿಯನ್ನು ನೀಗಿಸುವೆನು. ಆಗ, ‘ನ್ಯಾಯದ ನಿವಾಸವೇ, ಪರಿಶುದ್ಧ ಪರ್ವತವೇ, ಸರ್ವೇಶ್ವರ ನಿನ್ನನ್ನು ಆಶೀರ್ವದಿಸಲಿ’ ಎಂಬ ಮಾತು ಜುದೇಯ ನಾಡಿನಲ್ಲೂ ಅದರ ನಗರಗಳಲ್ಲೂ ಮತ್ತೆ ಕೇಳಿಬರುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಯೆಹೂದ ದೇಶದಲ್ಲಿಯೂ ಅದರ ಪಟ್ಟಣಗಳಲ್ಲಿಯೂ ನಾನು ಅವರ ಸೆರೆಯನ್ನು ತಿರುಗಿ ತರುವಾಗ, ‘ನೀತಿಯ ನಿವಾಸವೇ, ಪರಿಶುದ್ಧ ಪರ್ವತವೇ, ಯೆಹೋವ ದೇವರು ನಿನ್ನನ್ನು ಆಶೀರ್ವದಿಸಲಿ,’ ಎಂದು ಇನ್ನೂ ಹೇಳುವರು.