Jeremiah 31:28 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಪೂರ್ವಕಾಲದಲ್ಲಿ, ಇಸ್ರೇಲ್ ಮತ್ತು ಯೆಹೂದಗಳ ಮೇಲೆ ನಾನು ಗಮನವಿಟ್ಟಿದ್ದೆನು. ಆದರೆ ನಾನು ಅವರನ್ನು ತೆಗೆದುಹಾಕುವ ಸಮಯಕ್ಕಾಗಿ ಕಾದುಕೊಂಡಿದ್ದೆ. ನಾನು ಅವರನ್ನು ಕೆಡವಿದೆ; ಅವರನ್ನು ಹಾಳುಮಾಡಿದೆ. ಅವರಿಗೆ ಅನೇಕ ಕಷ್ಟಗಳನ್ನು ಕೊಟ್ಟೆ. ಆದರೆ ಈಗ ಅವರನ್ನು ಅಭಿವೃದ್ಧಿಪಡಿಸುವದಕ್ಕಾಗಿ ಅವರನ್ನು ಘಲಶಾಲಿಗಳನ್ನಾಗಿ ಮಾಡಲು ಅವರ ಕಡೆಗೆ ಗಮನಹರಿಸುತ್ತೇನೆ” ಇದು ಯೆಹೋವನ ನುಡಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಮೊದಲು ಇವರನ್ನು ಕಿತ್ತುಹಾಕಲು, ಕೆಡವಲು, ಹಾಳುಮಾಡಲು, ನಾಶಪಡಿಸಲು, ಬಾಧಿಸಲು ಹೇಗೆ ಎಚ್ಚರಗೊಂಡಿದ್ದೆನೋ ಹಾಗೆಯೇ ಇನ್ನು ಮೇಲೆ ಇವರನ್ನು ಕಟ್ಟಲು, ನೆಡಲು ಎಚ್ಚರಗೊಳ್ಳುವೆನು. ಇದು ಯೆಹೋವನ ನುಡಿ.
Kannada BSI Bible 2016
ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಈ ಪಟ್ಟಣವನ್ನು ಕಸ್ದೀಯರ ಕೈಯಲ್ಲಿಯೂ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿಯೂ ಒಪ್ಪಿಸು ತ್ತೇನೆ; ಅವನು ಅದನ್ನು ವಶಪಡಿಸಿಕೊಳ್ಳುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಮೊದಲು ಇವರನ್ನು ಕಿತ್ತುಹಾಕಲು, ಕೆಡವಲು, ಹಾಳುಮಾಡಲು, ನಾಶಪಡಿಸಲು, ಬಾಧಿಸಲು ಹೇಗೆ ಎಚ್ಚರಗೊಂಡಿದ್ದೆನೋ ಹಾಗೆಯೇ ಇನ್ನು ಮೇಲೆ ಇವರನ್ನು ಕಟ್ಟಲು, ನೆಡಲು ಎಚ್ಚರಗೊಳ್ಳುವೆನು. ಇದು ಯೆಹೋವನ ನುಡಿ.
Kannada Bible (KNCL) BSI 2016
ಅವರನ್ನು ಕೀಳಲು ಕೆಡವಲು, ಅಳಿಸಲು ಹಾಳುಮಾಡಲು, ಈ ಮೊದಲು ಎಚ್ಚರವಹಿಸಿದ ಹಾಗೆಯೆ ಇನ್ನು ಮುಂದೆ ಅವರನ್ನು ಕಟ್ಟಲು ಹಾಗು ನೆಡಲು ಎಚ್ಚರವಹಿಸುವೆನು. ಇದು ಸರ್ವೇಶ್ವರನಾದ ನನ್ನ ನುಡಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಅವರನ್ನು ಕೀಳಲು, ಕೆಡವಲು, ಅಳಿಸಲು ಹಾಳುಮಾಡಲು, ಎಚ್ಚರವಹಿಸಿದ ಹಾಗೆಯೇ ಇನ್ನು ಮುಂದೆ ಅವರನ್ನು ಕಟ್ಟುವುದಕ್ಕೂ, ನೆಡುವುದಕ್ಕೂ ಅವರ ವಿಷಯವಾಗಿ ಎಚ್ಚರವಹಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.